Select Your Language

Notifications

webdunia
webdunia
webdunia
webdunia

ಸಂಕ್ರಾಂತಿಯಲ್ಲಿ ವಿಕ್ರಮ್ ಅಭಿನಯ ಐ ಬಿಡುಗಡೆ ?

ಸಂಕ್ರಾಂತಿಯಲ್ಲಿ ವಿಕ್ರಮ್ ಅಭಿನಯ ಐ ಬಿಡುಗಡೆ ?
chennai , ಬುಧವಾರ, 26 ನವೆಂಬರ್ 2014 (12:50 IST)
ಆಸ್ಕರ್ ಫಿಲಿಮ್ಸ್ ವಿ ರವಿಚಂದ್ರನ್ ಅವರು ನಿರ್ಮಿಸುತ್ತಿರುವ ಚಿತ್ರ ಐ ತನ್ನ ಆಡಿಯೋ ಕಾರ್ಯಕ್ರಮದ ಮೂಲಕ ಸಾಕಷ್ಟು ಹಂಗಾಮ ಮಾಡಿತ್ತು. ಈ ಬಗ್ಗೆ ನಾವು ಈ ಮೊದಲು ಬರೆದಿದ್ದೆವು. ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ವಿಕ್ರಮ್. 
 
ತಮಿಳು ಚಿತ್ರ 'ಐ'ನ್ನು ಶಂಕರ್ ಅವರು ನಿರ್ದೇಶಿಸಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಐ ಚಿತ್ರದ ಬಿಡುಗಡೆ ಎಂದು ಎಂದು ಕಾಯುತ್ತಿದ್ದ  ವಿಕ್ರಮ್ ಅವರ ಅಭಿಮಾನಿಗಳಿಗೆ ಖುಷಿಯ ಸಂಗತಿ. ಈ ಚಿತ್ರ ಸಂಕ್ರಾತಿ ಸಮಯದಲ್ಲಿ ಬಿಡುಗಡೆ ಆಗುತ್ತಿದೆ. 
 
ವಿಕ್ರಮ್ ಅಭಿಮಾನಿಗಳಿಗೆ ಸಂಕ್ರಾಂತಿ ಕಾಣಿಕೆಯಾಗಿ ನೀಡಲಾಗುತ್ತಿದೆ. ಈ ಚಿತ್ರದ ತೆಲುಗು ವರ್ಶನ್ ಆಡಿಯೋ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಯಾಮಿ ಜಾಕ್ಸನ್ ಚಿತ್ರದ ಹೀರೋಯಿನ್. ಎ ಆರ್ ರೆಹಮಾನ್ ಅವರ ಸಂಗೀತ ನಿರ್ದೇಶನದ  ಐ ಚಿತ್ರಕ್ಕೆ ಪಿ ಸಿ ಶ್ರೀರಾಮ್ ಅವರು ಛಾಯಾಗ್ರಹಕರಾಗಿದ್ದಾರೆ.
 
ಸಂಕ್ರಾತಿ ಕಾಲಿವುಡ್  ಮತ್ತು ಟಾಲಿವುಡ್ ನವರಿಗೆ ಅತ್ಯಂತ ಶುಭದಾಯಕ ಹಬ್ಬ ಆಗ  ಬಿಡುಗಡೆ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇರೀತಿ 'ಐ' ಅಲ್ಲದೆ ಅನೇಕ ಚಿತ್ರಗಳು ಸಹಿತ ಆ ಸಮಯದಲ್ಲಿ ಬಿಡುಗಡೆ ಆಗಲಿದೆ. 
 
 

Share this Story:

Follow Webdunia kannada