Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡ್ತಾರಂತೆ ಮಣಿರತ್ನಂ

ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡ್ತಾರಂತೆ ಮಣಿರತ್ನಂ
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2016 (13:14 IST)
1983ರಲ್ಲಿ ಕನ್ನಡದಲ್ಲಿ ತೆರೆಕಂಡ ಅನಿಲ್ ಕಪೂರ್ ಅಭಿನಯದ ಸಿನಿಮಾವನ್ನ ಪಲ್ಲವಿ  ಅನುಪಲ್ಲವಿ ಸಿನಿಮಾವನ್ನು ಯಾವೊಬ್ಬ ಕನ್ನಡಾಭಿಮಾನಿಯೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಈ ಸಿನಿಮಾವನ್ನು ನಿರ್ದೇಶಿಸಿದ್ದು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ. 
 
     ಇದೀಗ ಮಣಿರತ್ನಂ ಕನ್ನಡದಲ್ಲಿ ಬಹು ವರ್ಷಗಳ ನಂತ್ರ ಸಿನಿಮಾವೊಂದನ್ನು ಮಾಡಲು ನಿರ್ಧರಿಸಿದ್ದಾರಂತೆ.30 ವರ್ಷಗಳ ನಂತರ ಕನ್ನಡದಲ್ಲಿ ಮಣಿರತ್ನಂ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಮಣಿರತ್ನಂ ಈ ವಿಷಯವನ್ನು ಅವರು ಹೊರ ಹಾಕಿದ್ದಾರೆ. ಅಲ್ಲದೇ ಮಣಿರತ್ನಂ ಅವರು ಸಿನಿಮಾ ನಿರ್ದೇಶನ ಮಾಡಿದ್ರೆ ಕನ್ನಡದ ಖ್ಯಾತ ನಿರ್ದೇಶಕ ನಿರ್ಮಾಪಕರಾದ ರಾಜೇಂದ್ರ ಸಿಂಗ್ ಬಾಬು ಅವರು ಬಂಡವಾಳ ಹೂಡಲಿದ್ದಾರಂತೆ. 
 
     ಇನ್ನು ಯಾವ ರೀತಿಯ ಸಿನಿಮಾ ಮಾಡ್ತಾರಂತೆ ಯಾವಾಗ ಸಿನಿಮಾ ಬರುತ್ತೆ ಅನ್ನೋ ಕುರಿತು ಮಣಿರತ್ನಂ ಅವರಾಗಲಿ ಇಲ್ಲಾ ರಾಜೇಂದ್ರ ಸಿಂಗ್ ಬಾಬ ಅವರು ಯಾವುದೇ ಮಾಹಿತಿ ಹೊರಹಾಕಿಲ್ಲ. ಆದ್ರೆ ಇಬ್ಬರ ಕಾಂಬಿನೇಷನ್ ಅಂದ್ರೆ ಅದು ಅದ್ಭುತವಾಗಿರುತ್ತೆ ಅನ್ನೋದಂತು ನಿಜ.
 
 
 

Share this Story:

Follow Webdunia kannada