Select Your Language

Notifications

webdunia
webdunia
webdunia
webdunia

ಎರಡು ಕನಸು ಚಿತ್ರದ ರೀಮೇಕ್ ಅಂದು ರಾಜ್ ಇಂದು ವಿಜಯ್ ರಾಘವೇಂದ್ರ

ಎರಡು ಕನಸು ಚಿತ್ರದ ರೀಮೇಕ್ ಅಂದು ರಾಜ್ ಇಂದು ವಿಜಯ್ ರಾಘವೇಂದ್ರ
, ಮಂಗಳವಾರ, 23 ಡಿಸೆಂಬರ್ 2014 (11:17 IST)
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ.. ಈ ಹಾಡು ಎಂದೆಂದಿಗೂ ಮರೆಯಲಾಗದ ಪ್ರೇಮ ಗೀತೆ. ಎರಡು ಕನಸು ಚಿತ್ರದಲ್ಲಿ ಡಾ. ರಾಜ್ ಕುಮಾರ್ ಮತ್ತು ಮಂಜುಳಾ ಅವರ ನಟನೆಯ ಹಾಡು ಈಗಲೂ ಸಹಿತ ಮೈಮನ ಪುಳಕಿತ ಗೊಳಿಸುತ್ತದೆ. ಅದೇರೀತಿ ಆ ಚಿತ್ರದ ಮತ್ತೊಂದು ಹಾಡು ತಮ್ ನಮ್ ತಮ್ ನಮ್ ಸಹ ಕಲ್ಪನ ಮತ್ತು ರಾಜ್ ಅಭಿನಯವನ್ನು ನೆನಪಿಸಿ ಮೈ ಮನ ನವಿರೇಳಿಸುತ್ತದೆ. ಅಷ್ಟೊಂದು ಸುಂದರ ಗೀತೆಗಳು. 1974 ರಲ್ಲಿ ವಾಣಿ ಅವರ ಕಾದಂಬರಿ ಆಧಾರಿತ ಚಿತ್ರ ಬಿಡುಗಡೆ ಆಗಿ ಯಶಸ್ಸನ್ನು ಪಡೆದ ಚಿತ್ರ. 
ಡಾಕ್ಟರ್ ರಾಜಕುಮಾರ್, ಕಲ್ಪನ, ಮಂಜುಳ ಅಭಿನಯದ  ಚಿತ್ರ ಎರಡು ಕನಸು ಅಂದು,ದೊರೈ-ಭಗವಾನ್ ಅವರು ನಿರ್ದೇಶನ ಮಾಡಿದ್ದರು. ಅವರ ಜೊತೆಯಾಗಿ ,ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದರು. ಈಗ ಮತ್ತೆ  ಆ ಚಿತ್ರ  ಜನರ ಮುಂದೆ ಬರುತ್ತಿದೆ. ನೀವು  ನಿರೀಕ್ಷಿಸಿದಂತೆ ಮತ್ತೆ ಹಳೆಯ ಚಿತ್ರ ಬಿಡುಗಡೆ ಆಗುವುದಿಲ್ಲ ಬದಲಿಗೆ ಆ ಚಿತ್ರವನ್ನು ರೀಮೇಕ್ ಮಾಡಲಾಗುತ್ತಿದೆ. 
 
2015 ಜನವರಿ ಎರಡನೇ ವಾರದಿಂದ ಎರಡು ಕನಸು ಚಿತ್ರೀಕರಣ ಪ್ರಾರಂಭ ಎಂದು ಸ್ಟರ್ಲಿಂಗ್ ಮೂವಿ ಮಕೇರ್ಸ್ ನಿರ್ಮಾಪಕ ಅಶೋಕ್ ಕೆ ಬಿ  ತಿಳಿಸಿದ್ದಾರೆ. ಮದನ್ ಅವರ ಚೊಚ್ಚಿಲ ನಿರ್ದೇಶನದ ಚಿತ್ರವಾಗಿದೆ. ಎರಡು ಕನಸಿನ ಯಥಾವತ್ ಮಾಡಲು ಸಿದ್ಧ ಆಗಿರುವ ಮದನ್ ಈ ಮೊದಲು ಓಂ ಪ್ರಕಾಶ್ ಅವರ ಬಳಿ ಕೆಲಸ ಮಾಡುತ್ತಿದ್ದರು. 
 ವಿಜಯ ರಾಘವೇಂದ್ರ ಅವರು ಡಾ. ರಾಜ್ ಕುಮಾರ್ ಮಾಡಿದ್ದ ಪಾತ್ರ ಮಾಡುತ್ತಿದ್ದಾರೆ. 
 
ಸ್ಟೀವ್- ಕೌಶಿಕ್ ಜೋಡಿ  ವಿಜಯ್ ರಾಘವೇಂದ್ರ ಅಭಿನಯದ ಸಿನಿಮಾಕ್ಕೆ ಆಕಾಶ್ ಸ್ಟುಡಿಯೋ ಅಲ್ಲಿ ಹಾಡುಗಳ ಧ್ವನಿ ಮುದ್ರಣ ಕೆಲಸ ಪ್ರಾರಂಭ ಮಾಡಿದೆ. 
 

Share this Story:

Follow Webdunia kannada