Webdunia - Bharat's app for daily news and videos

Install App

ರಶ್ಮಿಕಾ ಜೊತೆ ಎಂಗೇಜ್ ಮೆಂಟ್ ಬಗ್ಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ

Krishnaveni K
ಶನಿವಾರ, 20 ಜನವರಿ 2024 (10:20 IST)
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಜೊತೆ ತಾವು ಎಂಗೇಜ್ ಮೆಂಟ್ ಆಗುತ್ತಿರುವುದಾಗಿ ವರದಿಗಳು ಹರಡಿರುವ ಬಗ್ಗೆ ನಟ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಇಬ್ಬರೂ ವಿಯೆಟ್ನಾಂಗೆ ಜೊತೆಯಾಗಿ ಪ್ರವಾಸ ಮಾಡಿದ್ದರು ಎಂಬುದಕ್ಕೆ ಕೆಲವು ಫೋಟೋಗಳು ಪುರಾವೆಯಾಗಿ ಸಿಕ್ಕಿತ್ತು. ಅದರ ಜೊತೆಗೆ ಇಬ್ಬರೂ ಫೆಬ್ರವರಿಯಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇತ್ತು. ಬಳಿಕ ವಿಜಯ್ ದೇವರಕೊಂಡ ಟೀಂ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿತ್ತು.

ಇದೀಗ ಸ್ವತಃ ವಿಜಯ್ ದೇವರಕೊಂಡ ರೂಮರ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಬಹುಶಃ ಮಾಧ‍್ಯಮದವರು ಪ್ರತೀ ಎರಡು ವರ್ಷಕ್ಕೊಮ್ಮೆ ಮದುವೆಯಾಗಬೇಕು ಎಂದು ಬಯಸುತ್ತಾರೆ. ಪ್ರತೀ ವರ್ಷವೂ ಈ ರೂಮರ್ ಕೇಳುತ್ತೇನೆ. ಎಲ್ಲರೂ ನನ್ನ ಮದುವೆಗಾಗಿಯೇ ಕಾಯುತ್ತಿರುವಂತಿದೆ’ ಎಂದು ವಿಜಯ್ ಹೇಳಿದ್ದಾರೆ.

ಈ ಮೂಲಕ ಮದುವೆ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಆದರೆ ರಶ್ಮಿಕಾ ಮತ್ತು ವಿಜಯ್ ಕಳೆದ ಕೆಲವು ಸಮಯದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಮಾನಿ ಮಾತ್ರ ಅಭಿಮಾನಿಗಳಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಡೀಪ್‌ಪೇಕ್‌ ಮಾಡುವವರಿಗೆ ಕಾನೂನು ಕ್ರಮದ ವಾರ್ನಿಂಗ್ ಕೊಟ್ಟ ನಟ ಮೃಣಾಲ್ ಠಾಕೂರ್

ಗಜಿನಿ, ಗಜ ಸೇರಿದಂತೆ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದ ಬಹುಭಾಷಾ ನಟ ಪ್ರದೀಪ್ ರಾವತ್‌ ಇನ್ನಿಲ್ಲ

ನಟ ಧ್ರುವ ವಿಕ್ರಮ್ ಜತೆಗಿನ ಬ್ರೇಕಪ್ ವದಂತಿ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್

ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಗೆ ಡಬಲ್‌ ಧಮಾಕಾ: ರಾಮಾಯಾಣ ಟ್ರೈಲರ್‌ ಆಯ್ತು, ಈಗ ಟಾಕ್ಸಿಕ್‌ ಸರದಿ

ಬಿಗ್​​ಬಾಸ್ ರಿಯಾಲಿಟಿ ಶೋ ಮೊದಲ ಪ್ರೋಮೊ ಬಿಡುಗಡೆ: ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ಸುದೀಪ್‌

ಮುಂದಿನ ಸುದ್ದಿ
Show comments