Webdunia - Bharat's app for daily news and videos

Install App

ರಜನಿಕಾಂತ್ ಜತೆ ತೆರೆಹಂಚಿಕೊಳ್ಳಲಿರುವ ವಿದ್ಯಾ ಬಾಲನ್

Webdunia
ಮಂಗಳವಾರ, 21 ಫೆಬ್ರವರಿ 2017 (16:51 IST)
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯಕ್ಕೆ ಶಂಕರ್ ನಿರ್ದೇಶನದ ಅದ್ದೂರಿ ಚಿತ್ರ 2.0 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಅವರು ಕಬಾಲಿ ನಿರ್ದೇಶಕ ಪಾ ರಂಜಿತ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ರಜನಿಕಾಂತ್ ಅಳಿಯ, ನಟ ಧನುಷ್ ಈ ಚಿತ್ರದ ನಿರ್ಮಾಪಕರು.
 
ಮೇ ತಿಂಗಳಲ್ಲಿ ಈ ಚಿತ್ರ ಸೆಟ್ಟೆರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ತಾರಾಗಣದ ಆಯ್ಕೆಯಲ್ಲಿ ಚಿತ್ರತಂಡ ಬಿಜಿಯಾಗಿದೆ. ರಜನಿಕಾಂತ್‌ಗೆ ಈ ಬಾರಿ ವಿದ್ಯಾ ಬಾಲನ್ ಜೋಡಿಯಾಗಲಿದ್ದಾರೆ. ಈಗಾಗಲೆ ವಿದ್ಯಾ ಬಾಲನ್ ಜತೆ ಮಾತುಕತೆ ಮಾಡಲಾಗಿದೆಯಂತೆ. ನಟಿಸಲು ಅವರು ಸಹ ಆಸಕ್ತಿ ತೋರಿದ್ದಾರೆ ಎನ್ನುತ್ತವೆ ಮೂಲಗಳು.
 
ಒಂದು ವೇಳೆ ಇದೇ ನಿಜವಾದರೆ ವಿದ್ಯಾ ಬಾಲನ್ ಕೋಲಿವುಡ್‌ನಲ್ಲಿ ಅಭಿನಯಿಸುತ್ತಿರುವ ಮೊದಲ ಚಿತ್ರವಾಗಲಿದೆ. ಈ ಮೂಲಕ ದಕ್ಷಿಣದ ಚಿತ್ರಗಳಲ್ಲೂ ವಿದ್ಯಾ ಬಾಲನ್ ಹವಾ ಮುಂದುವರೆಯಲಿದೆ. ರಜನಿಕಾಂತ್ ಜತೆ ವಿದ್ಯಾ ಬಾಲನ್ ಅಭಿನಯಿಸುತ್ತಿರುವುದು ಇದೇ ಮೊದಲು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಎಕ್ಕ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ಮಂತ್ರಾಲಯಕ್ಕೆ ಯುವ ರಾಜ್‌ಕುಮಾರ್ ಭೇಟಿ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮುಂದಿನ ಸುದ್ದಿ
Show comments