Select Your Language

Notifications

webdunia
webdunia
webdunia
webdunia

ವಾಸ್ಕೋಡಿಗಾಮಾನ ಎಂಟ್ರಿಗೆ ಮುಹೂರ್ತ ಫಿಕ್ಸ್

ವಾಸ್ಕೋಡಿಗಾಮಾನ ಎಂಟ್ರಿಗೆ ಮುಹೂರ್ತ ಫಿಕ್ಸ್
, ಶುಕ್ರವಾರ, 28 ಆಗಸ್ಟ್ 2015 (10:43 IST)
ವಾಸ್ಕೋಡಿಗಾಮ ಸಿನಿಮಾ ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ  ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಭಾರೀ ಸುದ್ದಿಗೆ ಕಾರಣವಾಗಿತ್ತು.

 
ಆಗಸ್ಟ್ 10 ರಂದು ಈ ಸಿನಿಮಾದ ಟ್ರೇಲರ್ ಅನ್ನು ರಾಜ್ಯದ 250 ಕಾಲೇಜುಗಳಲ್ಲಿ 25 ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಟ ಶ್ರೀಮುರಳಿ ಬಿಡುಗಡೆ ಮಾಡಿದ್ರು. ಇದೀಗ ಇದೇ ಸಿನಿಮಾ ತನ್ನ ರಿಲೀಸ್ ಡೇಟ್ ಅನ್ನು ಫಿಕ್ಸ್ ಮಾಡಿದೆ. ಸಪ್ಟಂಬರ್ 11 ರಂದು ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗುತತಿದೆ.ವಾಸ್ಕೋಡಿಗಾಮಾ ವಿದ್ಯಾರ್ಥಿಗಳು ಹಾಗೂ ಕಾಲೇಜು ಸುತ್ತ ಹೆಣೆದಿರುವ ಕಥೆಯಾಗಿದೆ.
 
ಸಿನಿಮಾದಲ್ಲಿ ಕಿಶೋರ್  ನಾಯಕನಾದ್ರೆ, ಪಾರ್ವತಿ ಮೆನನ್ ಹಾಗೂ ಯಜ್ಞಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಕ್ರಿಯೇಶನ್ಸ್ ಬ್ಯಾನರ್ ನಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ..

Share this Story:

Follow Webdunia kannada