Select Your Language

Notifications

webdunia
webdunia
webdunia
webdunia

ಶಾರೂಖ್ ತಮ್ಮನಾಗಿ ವರುಣ್ ಧವನ್ ನಟನೆ

ಶಾರೂಖ್ ತಮ್ಮನಾಗಿ ವರುಣ್ ಧವನ್ ನಟನೆ
, ಮಂಗಳವಾರ, 30 ಜೂನ್ 2015 (10:20 IST)
ಬಾಲಿವುಡ್ ನ ಯಶಸ್ವಿ ಯಂಗ್ ಹೀರೋ ವರುಣ್ ಧವನ್ ಈಗ ತಮ್ಮ ಮುಂದಿನ ಚಿತ್ರದಲ್ಲಿ ನಟಿಸಲೆಂದು ಬಲ್ಗೇರಿಯಾ ದೇಶಕ್ಕೆ ಹೊರಟಿದ್ದಾರೆ. ಅವರು ಕಿಂಗ್ ಖಾನ್ ಶಾರೂಖ್ ಖಾನ್ ಅವರ ಮುಂದಿನ ಚಿತ್ರವಾದ ದಿಲ್ವಾಲೆಯಲ್ಲಿ ಅವಕಾಶ ಪಡೆದಿದ್ದಾರೆ. ಈ ಸಂಗತಿ ಸತ್ಯ ಎಂದು ಅವರು  ಬಾಲಿವುಡ್ ಸಿನಿಮಾಗಳ ಬಗ್ಗೆ  ಬರೆಯುವ ವೆಬ್ಸೈಟ್ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಶಾರೂಖ್ ಖಾನ್  ಮತ್ತು ಕಾಜೋಲ್ ಅಭಿನಯಿಸುತ್ತಿರುವ ಈ ಚಿತ್ರವನ್ನು ರೋಹಿತ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ವರುಣ್ ಅವರು ಶಾರೂಖ್ ಖಾನ್ ಅವರ ಕಿರಿಯ ಸಹೋದರನ ಪಾತ್ರಧಾರಿಯಾಗಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಾರೂಖ್ ಖಾನ್ ಅವರ ಜೊತೆ ವರುಣ್ ತೆರೆ ಹಂಚಿಕೊಳ್ಳುತ್ತಿದ್ದಾರೆ.  
ವರುಣ್ ಜೊತೆ ಕೃತಿ ಸನನ್ ಹಾಗೂ  ಕೊರಿಯಾಗ್ರಾಫರ್ ರೆಮೋ ಡಿಸೋಜ ಸಹಿತ ಹೋಗುತ್ತಿದ್ದಾರೆ. ಅಲ್ಲಿ ಹಾಡಿನ ಚಿತ್ರೀಕರಣ ಆಗಲಿದೆ. ಐದು ವರ್ಷಗಳ ಬಳಿಕ ಶಾರೂಖ್ ಹಾಗೂ ಕಾಜೋಲ್ ಮತ್ತೊಮ್ಮೆ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ.2010 ರಲ್ಲಿ ಕರಣ್ ಜೋಹರ್ ಅವರ ನಿರ್ದೇಶನದ ಮೈ ನೆಮ್ ಈಸ್ ಖಾನ್ ಚಿತ್ರದ ಬಳಿಕ ಅವರು ಒಟ್ಟಿಗೆ ನಟಿಸಿರಲಿಲ್ಲ. ಈಗ ಮತ್ತೆ ಶಾರೂಖ್ ಮತ್ತು ಕಾಜೋಲ್ ರೋಹಿತ್ ಜೊತೆ ಸೇರಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ  ಶೆಟ್ಟಿ ಹಾಗೂ ಖಾನ್ ಜೋಡಿಯ ಚೆನ್ನೈ ಎಕ್ಸ್ಪ್ರೆಸ್   ಯಶಸ್ವಿ ಚಿತ್ರಗಳ ಸಾಲಿಗೆ ಸೇರಿತ್ತು.

Share this Story:

Follow Webdunia kannada