Select Your Language

Notifications

webdunia
webdunia
webdunia
webdunia

ಬಿಡುಗಡೆಗೆ ತುದಿಗಾಲಲ್ಲಿ ನಿಂತಿರುವ 'ವಜ್ರಕಾಯ'

ಬಿಡುಗಡೆಗೆ ತುದಿಗಾಲಲ್ಲಿ ನಿಂತಿರುವ 'ವಜ್ರಕಾಯ'
, ಮಂಗಳವಾರ, 26 ಮೇ 2015 (10:18 IST)
ಸುದೀಪ್ ಅವರ ಅಭಿನಯದ ರನ್ನ ಚಿತ್ರ ಎಂದು ಬಿಡುಗಡೆ ಆಗುತ್ತದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಜೂನ್ ಮೊದಲವಾರದಲ್ಲಿ ಆ ಚಿತ್ರದ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಈಗ ಸುದೀಪ್ ಅಭಿಮಾನಿಗಳಿಗೆ ಬಾಯಿಪಾಠ ಆಗಿದೆ. ಆದರೆ ಶಿವರಾಜ್ ಕುಮಾರ್ ಅಭಿಮಾನಿಗಳು ಸಹ ತಮ್ಮ ಪ್ರೀತಿಯ ನಾಯಕ ಶಿವಣ್ಣನ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಈಗ ಬಂದಿರುವ ಸುದ್ದಿ ಅಂದ್ರೆ ಶಿವಣ್ಣನ ಚಿತ್ರವೂ ಸಹಿತ ಪ್ರಾಯಶಃ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ಹರ್ಷ ನಿರ್ದೇಶನದ ಭಜರಂಗಿ ಚಿತ್ರದಲ್ಲಿ ನಟಿಸಿ ಆ ಚಿತ್ರವನ್ನು ಗೆಲ್ಲಿಸಿದ್ದ ಶಿವರಾಜ್ ಕುಮಾರ್ ಮತ್ತೊಮ್ಮೆ ವಜ್ರಕಾಯ ಎನ್ನುವ ಹೆಸರಿನ ಚಿತ್ರದಲ್ಲಿ ಹರ್ಷ ನಿರ್ದೇಶನದಲ್ಲಿ  ನಟಿಸಿದರು. ಆ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ಸ್ಪಷ್ಟ ಮಾಹಿತಿ ದೊರಕಿರಲಿಲ್ಲ. ಈಗ ಒಂದರ್ಥದಲ್ಲಿ ವಜ್ರಕಾಯ ಬಿಡುಗಡೆ ಆಗುವ ದಿನಗಳು ಸಮೀಪದಲ್ಲೇ ಇದೆ. 
 
ಈ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣವಾಗಿದ್ದು, ಎಲ್ಲ ಕೆಲಸಗಳನ್ನು  ಪೂರೈಸಿ ಸೆನ್ಸಾರ್ ಬೋರ್ಡ್ ಕಡೆಯಿಂದ ಅನುಮತಿಗಾಗಿ ಕಾಯುತ್ತಿದೆ. ಅದು ಸಿಕ್ಕ ನಂತರ ಸಿನಿಮಾ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಎನ್ನುವ ಮಾಹಿತಿ ಇದೆ. ಈ ಚಿತ್ರದ ಹಂಚಿಕೆದಾರರಾಗಿರುವ ಜಯಣ್ಣ ಅವರು ಸಂತೋಷ್ ಚಿತ್ರ ಮಂದಿರದಲ್ಲಿ ಈಗ ಇರುವ ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಬದಲಿಗೆ ಈ ಚಿತ್ರವನ್ನು ಪ್ರದರ್ಶಿಸುತ್ತಾರಂತೆ.  

Share this Story:

Follow Webdunia kannada