Select Your Language

Notifications

webdunia
webdunia
webdunia
webdunia

'ಉತ್ತಮ ವಿಲನ್‌'ಗೆ ಮತ್ತೆ ವಿವಾದ: ಎನ್ಒಸಿ ಇಲ್ಲದೆ ಬಿಡುಗಡೆ ಇಲ್ಲ

'ಉತ್ತಮ ವಿಲನ್‌'ಗೆ ಮತ್ತೆ ವಿವಾದ: ಎನ್ಒಸಿ ಇಲ್ಲದೆ ಬಿಡುಗಡೆ ಇಲ್ಲ
ಚೆನ್ನೈ , ಶನಿವಾರ, 2 ಮೇ 2015 (13:26 IST)
ಸ್ಯಾಂಡಲ್ ವುಡ್ ನ ಪ್ರಖ್ಯಾತ ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶಿಸಿರುವ ಉತ್ತಮ ವಿಲನ್ ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದ್ದು, ಫೈನಾನ್ಶಿಯರ್ಸ್‌ಗಳಿಂದ ಎನ್ಒಸಿ ತರದೆ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ವಿತರಕರು ಪಟ್ಟು ಹಿಡಿದಿದ್ದಾರೆ. 
 
ಹೌದು, ಮೂಲಗಳ ಪ್ರಕಾರ ಚಿತ್ರವು ನಿನ್ನೆಯೇ ಬಿಡುಗಡೆ ಕಾಣಬೇಕಿತ್ತು. ಆದರೆ ನಿರ್ಮಾಪಕರು ಹಾಗೂ ವಿತರಕರ ಒಳ ಜಗಳಗಳಿಂದ ನಿನ್ನೆ ಬಿಡುಗಡೆ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. ಆದರೆ ಸಮಸ್ಯೆಗಳನ್ನು ಬಗೆ ಹರಿಸಿಕೊಂಡ ಬಳಿಕ ಇಂದು ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ವಿತರಕರು ಪ್ರಸ್ತುತ ಮತ್ತೊಂದು ಕ್ಯಾತೆ ತೆಗೆದಿದ್ದು, ಬಂಡವಾಳ ಹೂಡಿಕೆದಾರ(ನಿರ್ಮಾಪಕ)ರಿಂದ ಎನ್ಒಸಿ(ನೋ ಅಬ್ಜೆಕ್ಷನ್ ಸೆರ್ಟಿಫಿಕೇಟ್) ಪತ್ರ ತರದಿದ್ದಲ್ಲಿ ಚಿತ್ರದ ಬಿಡುಗಡೆ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. 
 
ಇನ್ನು ಈ ಸಂಬಂಧ ಚೆನ್ನೈ ಫಿಲ್ಮ್ ಚೇಂಬರ್‌ನಲ್ಲಿ ನಿರ್ಮಾಪಕ ಹಾಗೂ ವಿತರಕರ ನಡುವೆ ಸಂಧಾನ ಕಾರ್ಯವನ್ನು ಏರ್ಪಡಿಸಲಾಗಿದ್ದು, ನಟ ಶರತ್ ಕುಮಾರ್ ಅವರ ನೇಕತೃತ್ವದಲ್ಲಿ ಸಂಧಾನ ನಡೆಯುತ್ತಿದೆ. 
 
ರಾಜ್ ಕಮಲ್ ಫಿಲಂಸ್ ಕಂಪನಿಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ತಿರುಪತಿ ಬ್ರದರ್ಸ್ ಎಂದೇ ಖ್ಯಾತಿ ಪಡೆದಿರುವ ಎನ್.ಲಿಂಗುಸ್ವಾಮಿ ಹಾಗೂ ಎನ್.ಸುಭಾಷ್ ಚಂದ್ರ ಬೋಸ್ ನಿರ್ಮಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ನಟ ಕಮಲ್ ಹಾಸನ್ ನಾಯಕರಾಗಿಪ್ರಧಾನ ಪಾತ್ರಧಾರಿಯಾಗಿದ್ದು, ಕಥೆಯನ್ನೂ ಕೂಡ ಅವರೇ ಬರೆದಿದ್ದಾರೆ. ನಟಿ ಊರ್ವಶಿ ಅವರು ನಾಯಕಿಯಾಗಿದ್ದು, ಕಮಲ್‌ಗೆ ಜೋಡಿಯಾಗಿದ್ದಾರೆ. ಅಂದೇರಾ ಜರೇಮಯ್ಯ, ಪೂಜಾ ಕುಮಾರ್ ಪಾರ್ವತಿ ಸೇರಿದಂತೆ ಇತರರು ಭೂಮಿಕೆ ಹಂಚಿಕೊಂಡಿದ್ದಾರೆ. ಮೊದಮ್ಮದ್ ಗಿಬ್ರಾನ್ ಅವರ ಸಂಗೀತ ಮತ್ತು ವಿಜಯ್ ಶಂಕರ್ ಅವರ ಸಂಕಲನ ಚಿತ್ರಕ್ಕಿದ್ದು, ಶ್ಯಾಮ್ ದಟ್ ಅವರು ಛಾಯಾಗ್ರಹಣ ಚಿತ್ರಕ್ಕಿದೆ. 

Share this Story:

Follow Webdunia kannada