Select Your Language

Notifications

webdunia
webdunia
webdunia
webdunia

ತ್ರಿಷಾ ಹೆಸರನ್ನು ನಾಯಿಗೆ ಇಟ್ಟಿದ್ರೂ ಆಕೆಗೆ ಕೋಪ ಬಂದಿಲ್ಲವಂತೆ.. ಯಾಕೆಂದ್ರೆ!!

ತ್ರಿಷಾ ಹೆಸರನ್ನು ನಾಯಿಗೆ ಇಟ್ಟಿದ್ರೂ ಆಕೆಗೆ ಕೋಪ ಬಂದಿಲ್ಲವಂತೆ.. ಯಾಕೆಂದ್ರೆ!!
, ಸೋಮವಾರ, 21 ಏಪ್ರಿಲ್ 2014 (10:09 IST)
ದಕ್ಷಿಣ ಭಾರತದ ಹಾಟ್ ನಟಿ ತ್ರಿಷ. ಆಕೆ ಸದಾ ಸುದ್ದಿಯಲ್ಲಿರುವ   ನಟಿ ,ತನ್ನ ಆಟೋಟ ಗಳಿಂದ ಸದಾ ಮಾಧ್ಯಮಗಳ ಗಮನ ತನ್ನೆಡೆ ಸೆಳೆಯುವ ಈ ನಟಿಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಮಾಧ್ಯಮಿಗಳ ಹತ್ರ ತನ್ನನ್ನು ತೋರಿಸಿಕೊಳ್ಳುವ ಚಪಲ. ಈಗ ಮತ್ತೊಂದು ವಿಷಯದಲ್ಲಿ ಆಕೆ ಹೆಚ್ಚು   ಸುದ್ದಿ ಮಾಡುತ್ತಿದ್ದಾಳೆ. 
 
ತ್ರಿಷ ಗೆ ಪ್ರಾಣಿಗಳು ಎಂದರೆ ತುಂಬಾ ಇಷ್ಟ. ಅದರಲ್ಲೂ ನಾಯಿಗಳ ಬಗ್ಗೆ ಅಪರಿಮಿತ ಪ್ರೀತಿ. ಆಕೆಗೆ ರಸ್ತೆಯಲ್ಲಿ ಸಹ ಯಾವುದಾದರೂ ಬೀದಿ ನಾಯಿ ಕಂಡರೆ ಅದನ್ನು ಮನೆಗೆ ಕರೆತಂದು ರಕ್ಷಿಸಿ ಕಾಪಾಡುವ ಆಸಕ್ತಿ ಜೀವಂತ. ಇಂತಹ ಒಳ್ಳೆಯ ಮನದ ಹೆಣ್ಣುಮಗಳು ಈಗ ಪ್ರಾಣಿ ರಕ್ಷಣಾ ಸಂಸ್ಥೆಯಲ್ಲಿ ಸದಸ್ಯೆ ಆಗಿದ್ದಾಳೆ. ನಾವು ಹೇಳ ಹೊರಟಿರುವ ಸಂಗತಿ ಅದಲ್ಲ. ಈ ತ್ರಿಷ ನಾಯಿ ಸಂತತಿಯನ್ನು ಹೆಚ್ಚು ಮಾಡಿದ್ದಲ್ಲದೆ ಎರಡು ನಾಯಿಗಳನ್ನು ತನ್ನ ಸ್ನೇಹಿತೆಯರಿಗೆ ದತ್ತು ನೀಡಿದಳಂತೆ.
 
 ಅವರು ಅವುಗಳಿಗೆ ತ್ರಿಷ ಎನ್ನುವ ಹೆಸರನ್ನು ನಾಮಕರಣ ಮಾಡಿದ್ದಾರಂತೆ. ಈ ಸಂಗತಿ ಕೇಳಿದ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ಅಲ್ಲದೆ ಇನ್ನು ಸಾಕಷ್ಟು ನಾಯಿಗಳನ್ನು ಆಕೆ ದತ್ತು ನೀಡುತ್ತಾಳಂತೆ. ತ್ರಿಷ ಸಂತತಿ ಹೆಚ್ಚಾಗಲಿ ಎನ್ನುವ ಆಶಯ ವ್ಯಕ್ತ ಪಡಿಸಿದ್ದಾಳೆ ಈ ಚೆಲುವೆ... ಈ ಸಿನಿಮಾದವರು ಏನ್ ಮಾಡಿದರು ಸುದ್ದಿ ಆಗುತ್ತೆ ಬಿಡಿ ಅಂತಾ ಹೇಳ್ತಾ ಇದ್ದಾರೆ ಕಾಲಿವುಡ್ ಕುಹುಕಿಗಳು...  

Share this Story:

Follow Webdunia kannada