Select Your Language

Notifications

webdunia
webdunia
webdunia
webdunia

ಭಾವಿ ಪತಿ ವರುಣ್‌ಗೆ ಶಾಕ್ ನೀಡಿದ ತ್ರಿಷಾ

ಭಾವಿ ಪತಿ ವರುಣ್‌ಗೆ ಶಾಕ್ ನೀಡಿದ ತ್ರಿಷಾ
, ಶುಕ್ರವಾರ, 27 ಮಾರ್ಚ್ 2015 (10:00 IST)
ತ್ರಿಷಾ ವರುಣ್ ಮಣಿಯನ್ ಜೊತೆ ಪ್ರೀತಿ ಮಾಡುತ್ತಿದ್ದ ಸಮಯದಲ್ಲಿ ತ್ರಿಷ ಹೆಸರು ಹೇಳಿದರೆ ಸಾಕು ಪ್ರತ್ರಿಯೋರ್ವ ನಿರ್ಮಾಪಕರು ಹೆದರಿ ದೂರ ಸರಿಯುತ್ತಿದ್ದರು. ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಆದ ಸ್ವಲ್ಪ ಸಮಯದಲ್ಲಿ ತ್ರಿಷ ಅದೃಷ್ಟ ಬದಲಾಗಿದೆ. ಆಕೆಯ ಮನೆ ಮುಂದೆ ಹೇರಳ ಸಂಖ್ಯೆಯಲ್ಲಿ ನಿರ್ಮಾಪಕರು ಭೇಟಿ ಮಾಡಿ ತಮ್ಮ ಚಿತ್ರಗಳಲ್ಲಿ ನಟಿಸಲು ಕೇಳುತ್ತಿದ್ದಾರಂತೆ. ಈಗ ಆಕೆ ಕೈಲಿ   ಸುಮಾರು ಆರು ಚಿತ್ರಗಳಿವೆ ನಟಿಸಲು! 
ಪ್ರಸ್ತುತ ಆಕೆಯ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಗಿರಿಧರ್ ಎನ್ನುವ ವ್ಯಕ್ತಿ ನಿರ್ಮಿಸಲು ಹೊರಟಿರುವ ಹಾರರ್ ಚಿತ್ರದಲ್ಲಿ ನಟಿಸಲು ತ್ರಿಷ ಕಡೆಯಿಂದ ಹಸಿರು ನಿಶಾನೆ ದೊರೆತಿದೆ. ಈ ಚಿತ್ರ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. 
 
ಅಲ್ಲದೆ ಈಗ ಬಂದಿರುವ ಮತ್ತೊಂದು ಸುದ್ದಿ ಅಂದ್ರೆ ತ್ರಿಷ ತನ್ನ ಭಾವಿ ಪತಿ ವರುಣ್ ಮಣಿ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ತಮಿಳು ಚಿತ್ರವನ್ನು ತಿರು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ಆಕೆ ನಟಿಸುವುದು ಬಹುತೇಕ ನಿಶ್ಚಯ ಆಗಿತ್ತು. ಆದರೆ ಈಗ ತಿಳಿದ ಸಂಗತಿ ಅಂದ್ರೆ ತ್ರಿಷ ಕೈಲಿ ಬೇಕಾದಷ್ಟು ಚಿತ್ರಗಳಿವೆ. ಆ ಕಾರಣದಿಂದ ತನ್ನ ಪ್ರೇಮಿಯ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಿಲ್ಲ ಎಂದು ಕ್ಯಾನ್ಸಲ್ ಮಾಡಿದ್ದಾಳಂತೆ. 
 
ಆದರೆ ಅರಿಯದಂತೆ ಎದುರಾದ ಈ ಶಾಕ್ ಜೀರ್ಣಿಸಿ ಕೊಳ್ಳಲಾಗುತ್ತಿಲ್ಲವಂತೆ ವರುಣ್‌ಗೆ ತನ್ನ ಸಿನಿಮಾಗಳಿಗಾಗಿ ಮದುವೆಯನ್ನೇ ಮುಂದೂಡುತ್ತಿರುವ ಈ ತಾರೆ ಮುಂದೆ ವರುಣ್ ಜೊತೆ ಮದುವೆ ಆಗದೆ ಇರುವ ಸಾಧ್ಯತೆ ಇದೆ ಎಂದಿದ್ದಾರೆ ಕಾಲಿವುಡ್ ಮಂದಿ. ಮಾಜಿ ಪ್ರೇಮಿ ರಾಣ ದಗ್ಗುಬಾಟಿ ಈಗ ಎಂಥ ಭಾವ ಹೊಂದಿರ ಬಹುದೋ ? ಅವರೇ ಹೇಳ ಬೇಕು. 

Share this Story:

Follow Webdunia kannada