Select Your Language

Notifications

webdunia
webdunia
webdunia
webdunia

ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಥಿಯೇಟರಿಕಲ್ ಟ್ರೇಲರ್ ರಿಲೀಸ್

ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಥಿಯೇಟರಿಕಲ್ ಟ್ರೇಲರ್ ರಿಲೀಸ್
, ಗುರುವಾರ, 1 ಅಕ್ಟೋಬರ್ 2015 (11:00 IST)
ತನ್ನ ಟ್ರೇಲರ್ ನಿಂದಾನೇ ಆರು ಕೋಟಿ ಕನ್ನಡಿಗರ ದಿಲ್ ಕದ್ದ ಈ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸುದ್ದಿ ಮಾಡುತ್ತಿದೆ.  ಟೈಟಲ್ ಜೊತೆಗೆ ಈ ಸಿನಿಮಾದ ಟ್ಯಾಗ್ ಲೈನ್ ಕೂಡ ಸಖತ್ ಕ್ಯಾಚಿಯಾಗಿದೆ.  ವಿದ್ಯೆ 100% ಬುದ್ಧಿ 0% ಎನ್ನುವ ಟ್ಯಾಗ್ ಲೈನ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 
ಈಗ ಮತ್ತೆ ಫಸ್ಟ್ ರ್ಯಾಂಕ್ ರಾಜು ಸುದ್ದಿಯಲ್ಲಿದ್ದಾನೆ. ಅದೇನಪ್ಪ ಅಂದ್ರೆ ನಾಳೆ ರಿಲೀಸ್ ಆಗಲಿರೋ ದರ್ಶನ್ ಅಭಿನಯದ ಐರಾವತ ಚಿತ್ರದ ಜೊತೆಗೆ ಸಿಲ್ವರ್ ಸ್ಕ್ರೀನ್ ನಲ್ಲಿ ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಟ್ರೈಲರ್ ಕೂಡಾ ರಿಲೀಸ್ ಆಗಲಿದೆ. ಐರಾವತ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ಟ್ರೈಲರ್ ರನ್ ಆಗಲಿದೆ.
 
ಸಿನಿಮಾದಲ್ಲಿ ಸೈಬರ್ ಯುಗದೊಳ್ ಪ್ರೇಮಕಾವ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದದ ಗುರುನಂದನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನರೇಶ್ ಅನ್ನೋ ನವ ಪ್ರತಿಭೆ ನಿರ್ದೇಶಿಸಿದ್ದಾರೆ.  ಈಗಾಗಲೇ ಎಲ್ಲೆಡೆ ತನ್ನ ಹವಾ ಕ್ರಿಯೇಟ್ ಮಾಡಿರುವ ಈ ಸಿನಿಮಾ ಟ್ರೈಲರ್ ನಾಳೆಯಿಂದ  ಥಿಯೇಟರ್ ನಲ್ಲೂ ಕಾಣಿಸಿಕೊಳ್ಳಲಿದೆ. 

Share this Story:

Follow Webdunia kannada