Webdunia - Bharat's app for daily news and videos

Install App

ಇಂದು ಡಾ. ರಾಜ್‌ ಜನ್ಮದಿನ: ಮತ್ತೆ ಹುಟ್ಟಿ ಬನ್ನಿ ಅಣ್ಣಾವ್ರೆ

Webdunia
ಶುಕ್ರವಾರ, 24 ಏಪ್ರಿಲ್ 2015 (09:57 IST)
ಸಿಂಗಾನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್ ಎನ್ನುವ ಹೆಸರಿನ ಕನ್ನಡದ ಕಣ್ಮಣಿ ದಿವಂಗತ ಡಾ. ರಾಜ್ ಕುಮಾರ್, ಸಮಸ್ತ ಕನ್ನಡಿಗರ ಪ್ರೀತಿಯ ಅಣ್ಣಾವ್ರ ಜನ್ಮದಿನ ಇಂದು. ನಟ, ಹಾಡುಗಾರರಾಗಿ ಭಾರತೀಯ ಚಿತ್ರರಂಗ ಹಾಗೂ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದ ಮೇರು ನಟ ಡಾ. ರಾಜ್ ಕುಮಾರ್. ಇಂದು ಅವರ 86ನೇ ಜಯಂತ್ಯೋತ್ಸವ. 
ಡಾ ರಾಜ್ ಕುಮಾರ್ ಕನ್ನಡ ಸಂಸ್ಕೃತಿ ನೀಡಿದ ಕೊಡುಗೆ ಅಪಾರವಾದದ್ದು. ಈ ಗಾನಗಂಧರ್ವ ಗುಬ್ಬಿ  ವೀರಣ್ಣನವರ ನಾಟಕ ಕಂಪನಿಯಲ್ಲಿ ಬಾಲ ನಟರಾಗಿ ಎಂಟ್ರಿ ಆದರು. ಅದೇರೀತಿ ಸಿನಿ ರಂಗದಲ್ಲೂ ಸಹಿತ ಬಾಲ ಕಲಾವಿದರಾಗಿ ಸೇರ್ಪಡೆಯಾದರೂ ಸಹಿತ ಅವರಿಗೆ ಬ್ರೇಕ್ ನೀಡಿದ ಚಿತ್ರ 1954 ರಲ್ಲಿ ಬಿಡುಗಡೆಯಾದ ಬೇಡರ ಕಣ್ಣಪ್ಪ.  
 
ಈ ಚಿತ್ರ ಆಗ 220  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅವರ  71 ನೇ ವಯಸ್ಸಿನಲ್ಲಿ ದಂತಚೋರ ವೀರಪ್ಪನ್ ಅಪಹರಣ ಮಾಡಿ ಸುಮಾರು 108  ದಿನಗಳ ಕಾಲ ಅವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಡಾ, ರಾಜ್ ಕುಮಾರ್ ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲಂ ಫೇರ್ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ,ಎನ್ಟಿಆರ್ ನ್ಯಾಷನಲ್ ಅವಾರ್ಡ್, ಮೈಸೂರು ಯೂನಿವರ್ಸಿಟಿಯಿಂದ ಡಾಕ್ಟರೇಟ್, ಪದ್ಮಭೂಷಣ ಹಾಗೂ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪುರಸ್ಕಾರವಾದ ದಾದ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಸಹ ಗಳಿಕೆ ಮಾಡಿದ್ದರು. 1995 ರ ತನಕ ಸಿನಿರಂಗದಲ್ಲಿ ಸೇವೆ ಸಲ್ಲಿಸಿದ್ದ ಡಾ. ರಾಜ್ ಕುಮಾರ್ ಅವರು  2006 ರ ಎಪ್ರಿಲ್ 12 ರಂದು ಇಹಲೋಕ ತ್ಯಜಿಸಿದರು. 
 
ಅವರು ಐಹಿಕವಾಗಿ ಮರೆಯಾದರೂ ಮಾನಸಿಕವಾಗಿ ಅವರ ಅಭಿಮಾನಿಗಳಲ್ಲಿ ಹಂಚಿ ಹೋಗಿದ್ದಾರೆ. ಪ್ರೀತಿಯ ಅಣ್ಣಾವ್ರಿಗೆ ವೆಬ್ ದುನಿಯಾ ಕನ್ನಡ ತಂಡ ಹಾಗೂ ಸಮಸ್ತ ಓದುಗ ಬಳಗದಿಂದ  ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments