Select Your Language

Notifications

webdunia
webdunia
webdunia
webdunia

ಇಂದು ಥಿಯೇಟರ್ ಅಂಗಳಕ್ಕೆ ಬರುತ್ತಿದ್ದಾನೆ ಮಿಸ್ಟರ್ ಐರಾವತ

ಇಂದು ಥಿಯೇಟರ್ ಅಂಗಳಕ್ಕೆ ಬರುತ್ತಿದ್ದಾನೆ ಮಿಸ್ಟರ್ ಐರಾವತ
, ಗುರುವಾರ, 1 ಅಕ್ಟೋಬರ್ 2015 (11:02 IST)
ದರ್ಶನ್ ಅಭಿಮಾನಿಗಳು ಯಾವಾಗಪ್ಪ ಬೆಳಗಾಗುತ್ತೆ ಅಂತ ಕಾಯ್ತಿದ್ದಾರೆ. ಯಾಕಂದ್ರೆ ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಮೂವಿ ದರ್ಶನ್ ಅಭಿನಯದ ಐರಾವತ ಇವತ್ತು ತೆರೆಕಾಣಲಿದೆ.  ಅಭಿಮಾನಿಗಳು ಸಂತೋಷ್ ಚಿತ್ರಮಂದಿರದ ಮುಂಭಾಗ ನಿನ್ನೆಯಿಂದಲೇ ಸಂಭ್ರಮಾಚರಣೆ ಶುರು ಹಚ್ಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಸಂತೋಷ್ ಥಿಯೇಟರ್ ಮುಂಭಾಗ 72 ಅಡಿ ಎತ್ತರದ ದರ್ಶನ್ ಅವರ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿ ಅದಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. 
ಈಗ ಕರ್ನಾಟಕದಲ್ಲಿ ಐರಾವತ ಹವಾ ಶುರುವಾಗಿದೆ. ಬಿಡುಗಡೆಯ ಮುನ್ನವೆ ದಾಖಲೆಗಳ ಮೇಲೆ ದಾಖಲೆಗಳನ್ನ ಮಾಡಿ ಸದ್ದು ಮಾಡಿದ್ದ ಸಿನಿಮಾ. ಹೀಗಾಗಿ ಅಭಿಮಾನಿಗಳಲ್ಲೂ ಸಾಕಷ್ಟು ಕುತೂಹಲ ಗರಿಗೆದರಿದೆ. ಕರ್ನಾಟಕ ಸೇರಿದಂತೆ ಫಾರಿನ್ ನಲ್ಲೂ ಐರಾವತ ತೆರೆ ಕಾಣಲಿದೆ. ಉತ್ತರ ಅಮೇರಿಕಾದ  ಸುಮಾರು 200 ಚಿತ್ರಮಂದಿರಗಳಲ್ಲಿ ದರ್ಶನ್ ಅವರ  ಮಿಸ್ಟರ್ ಐರಾವತ ತೆರೆ ಕಾಣುತ್ತಿದ್ದು  ಕನ್ನಡ ಚಿತ್ರವೊಂದರ ಮಟ್ಟಿಗೆ ಇದು ದಾಖಲೆಯಾಗಿದೆ. 
 
ಜೊತೆಗೆ ಈ ಸಿನಿಮಾ ಸಾಕಷ್ಟು ಹೊಸತನದಿಂದ ಕೂಡಿದೆ. ಬಾಲಿವುಡ್ ಬೆಡಗಿ ಕಮ್ ಮಾಡೆಲ್ ಊರ್ವಶಿ ರೌಟೇಲ ಚಾಲೆಂಜಿಗ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅಲ್ಲದೆ ಪ್ರಕಾಶ್ ರೈ ಮೊದಲ ಬಾರಿಗೆ ದರ್ಶನ್ ಅಪೋಸಿಟ್ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದಾರೆ. ಇನ್ನು ನಾಳೆಯಿಂದ ಅಬ್ಬರಿಸೋದಕ್ಕೆ ಐರಾವತ ರೆಡಿಯಾಗಿದ್ದಾನೆ. ಗಾಂಧಿನಗರದ ಎಲ್ಲಾ ದಾಖಲೆಗಳನ್ನ ಧೂಳಿಪಟ ಮಾಡಿ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದನ್ನ ಸಾಬೀತು ಮಾಡೋಕೆ ದರ್ಶನ್ ಹೊರಟಿದ್ದಾರೆ.  
 
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹೊಸಬರ ಅಲೆ ಪ್ರಾರಂಭವಾಗಿದೆ. ಹೊಸಬರ  ಚಿತ್ರಗಳೇ ಚಂದನವನದಲ್ಲಿ ಸಾಲು ಸಾಲಾಗಿ ಸೆಟ್ಟೇರುತ್ತಿವೆ. ಹೊಸಬರು ಹೊಸ ಸಿನಿಮಾ ಮಾಡಿ ಗೆದ್ದು ಸಿನಿಮಾವನ್ನ ಹಿಂಗೂ ಮಾಡಬಹುದು ಅನ್ನೋ ದಾರಿ ತೋರಿಸಿದ್ದಾರೆ. ಅಂತಹ ಸಿನಿಮಾಗಳ ಸಾಲಿನಲ್ಲಿ ಫಸ್ಟ್ ರ್ಯಾಂಕ್ ರಾಜು ಸಿನಿಮಾ ಕೂಡ ಒಂದು.

Share this Story:

Follow Webdunia kannada