Select Your Language

Notifications

webdunia
webdunia
webdunia
webdunia

ಗಣೇಶ್ -ರಮೇಶ್ ಅರವಿಂದ್ ಸಿನಿಮಾಕ್ಕೆ ಟೈಟಲ್ ಫಿಕ್ಸ್

ಗಣೇಶ್ -ರಮೇಶ್ ಅರವಿಂದ್ ಸಿನಿಮಾಕ್ಕೆ ಟೈಟಲ್ ಫಿಕ್ಸ್
, ಶನಿವಾರ, 6 ಫೆಬ್ರವರಿ 2016 (10:31 IST)
ತೆಲುಗಿನ ಸೂಪರ್ ಹಿಟ್ ಸಿನಿಮಾ ಭಲೇ ಭಲೇ ಮಾಗಡಿವೋಯ್ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ಅವರು ಕನ್ನಡದಲ್ಲಿ ನಿರ್ಮಾಣ ಮಾಡುತ್ತಿರೋ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾವನ್ನು ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ಇದುವರೆಗೂ ಸಿನಿಮಾದ ಹೆಸರು ಏನ್ ಅನ್ನೋದು ಬಹಿರಂಗವಾಗಿರಲಿಲ್ಲ,ಆದ್ರೀಗ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಗಿದೆ.

 
ಈ ಸಿನಿಮಾದಲ್ಲಿ ಗಣೇಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾಕ್ಕೆ ಗಂಡು ಅಂದರೆ ಗಂಡು ಅಂತಾ ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಗಣೇಶ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಸಿನಿಮಾದಲ್ಲಿ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಮಿಂಚಿರುವ ನಟಿ ಶಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಶಾನ್ವಿ ಅವರದ್ದು ಸಿನಿಮಾದಲ್ಲಿ ವೈದ್ಯೆಯ ಪಾತ್ರವಂತೆ. ಇದುವರೆಗೂ ನಿರ್ವಹಿಸದ ಪಾತ್ರವಾಗಿರೋದರಿಂದ ಶಾನ್ವಿಗೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
ಅಂದ್ಹಾಗೆ ಗಂಡು ಅಂದರೆ ಗಂಡು ಸಿನಿಮಾ ಫೆಬ್ರವರಿ 25 ರಂದು ಅದ್ಧೂರಿಯಾಗಿ ಸೆಟ್ಟೇರಲಿದೆ.ಇನ್ನು  ಆರಂಭದಲ್ಲಿ ಈ ಸಿನಿಮಾದಲ್ಲಿ ನಟ ಯಶ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ ಅಂತಾ ಹೇಳಲಾಗಿತ್ತು.ಆದ್ರೆ ಬಳಿಕ ಗಣೇಶ್ ಅವರನ್ನು ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಮಾಡಲಾಗಿತ್ತು.

Share this Story:

Follow Webdunia kannada