Select Your Language

Notifications

webdunia
webdunia
webdunia
webdunia

ಕೊನೆಗೂ ಯಶ್ ಅವರ ಮುಂದಿನ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತು

ಕೊನೆಗೂ ಯಶ್ ಅವರ ಮುಂದಿನ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತು
ಬೆಂಗಳೂರು , ಶನಿವಾರ, 13 ಫೆಬ್ರವರಿ 2016 (12:44 IST)
ಯಶ್ ಅವರು ಅಭಿನಯಿಸುತ್ತಿರುವ ಸಿನಿಮಾದಲ್ಲಿ ಆದಿತ್ಯಾ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಅಂತಾ ಸುದ್ದಿಯಾಗಿತ್ತು. ಬಳಿಕ ಆದಿತ್ಯಾ ಬೇರೆ ಸಿನಿಮಾದಲ್ಲಿ ಕಮಿಟ್ ಆಗಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ ಅಂತಾ ಹೇಳಲಾಗಿತ್ತು.ಆದ್ರೆ ಸಿನಿಮಾದ ಟೈಟಲ್ ಮಾತ್ರ ಫಿಕ್ಸ್ ಆಗಿರಲಿಲ್ಲ.ಆದ್ರೀಗ ಸಿನಿಮಾದ ಟೈಟಲ್ ಪಕ್ಕಾ ಆಗಿದೆ.
 
  ಯಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾವನ್ನು ಕೆ. ಮಂಜು ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಈ ಸಿನಿಮಾಕ್ಕೆ ಸಿನಿಮಾ ತಂಡ ಗಾಂಧೀಕ್ಲಾಸ್ ಅಂತಾ ನಾಮಕರಣ ಮಾಡಿತ್ತು.ಆದ್ರೆ ಗಾಂಧೀಕ್ಲಾಸ್ ಎಂಬ ಹೆಸರು ಇಟ್ಟಿದ್ದು ಒಂಗಷ್ಟು ವಿವಾದಕ್ಕೆ ಕಾರಣ್ಕೆ ಮಂಜು ಈ ಹೆಸರು ಬೇಡ ಅಂತಾ ತೀರ್ಮಾನಿಸಿ ಬೇರೆ ಹೆಸರಿನ ಹುಡುಕಾಟದಲ್ಲಿದ್ದರು. ಅದಕ್ಕಾಗಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿತ್ತು. ಇದೀಗ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಸಿನಿಮಾಗೆ ಮಾಂಜ ಅನ್ನೋ ನಾಮಕರಣ ಮಾಡಲಾಗಿದೆ.
 
 ಮಾಂಜ ಅಂತಾ ಸಿನಿಮಾಕ್ಕೆ ಟೈಟಲ್ ಏನೋ ಫಿಕ್ಸ್ ಆಗಿದೆ.ಆದ್ರೆ ಈ ಟೈಟಲ್ ನಿರ್ದೇಶಕ- ನಿರ್ಮಾಪಕ ಅವರ ಕೈಯಲ್ಲಿದಂತೆ. ಟೈಟಲ್ ಹಕ್ಕನ್ನು ಅವರು ಹೊಂದಿದ್ದಾರಂತೆ. ಹಾಗಾಗಿ ಅವರು ಏನ್ ಹೇಳ್ತಾರೇ ಅನ್ನೋದರ ಮೇಲೆ ಟೈಟಲ್ ಚೇಂಛ್ ಆಗುತ್ತಾ ಇಲ್ಲಾ ಇದೇ ಇರುತ್ತಾ ಅನ್ನೋದು ನಿರ್ಧಾರವಾಗಲಿದೆ.

Share this Story:

Follow Webdunia kannada