Select Your Language

Notifications

webdunia
webdunia
webdunia
webdunia

ಮುಂದಿನ ವಾರ ತೆರೆಗೆ ಬರ್ತಿದೆ ಟೈಟ್ಲು ಬೇಕಾ ಸಿನಿಮಾ

ಮುಂದಿನ ವಾರ ತೆರೆಗೆ ಬರ್ತಿದೆ ಟೈಟ್ಲು ಬೇಕಾ ಸಿನಿಮಾ
, ಬುಧವಾರ, 7 ಅಕ್ಟೋಬರ್ 2015 (11:21 IST)
ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸಬರ ಮೇನಿಯಾ ಶುರುವಾಗಿದೆ. ಪ್ರತಿ ವಾರ ಹೊಸಬರ ಒಂದೊಂದು ಸಿನಿಮಾಗಳು ರಿಲೀಸ್ ಆಗುತ್ತಿದೆ. ಇದೀಗ ಹೊಸಬರ ತಂಡದ ಮತ್ತೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.ಅದುವೇ ಟೈಟ್ಲು ಬೇಕಾ ಸಿನಿಮಾ.
ಹೆಸರೇ ಹೇಳುವಂತೆ ಟೈಟ್ಲು ಬೇಕಾ ಸಿನಿಮಾ ವಿಭಿನ್ನವಾದ ಸಿನಿಮಾ. ಯೂತ್ ಒರಿಯಂಟೆಡ್ ಸಿನಿಮಾ. ಟೈಟ್ಲೇ ಪ್ರಶ್ನಾರ್ಥಕವಾಗಿರುವಂತೆ ಸಿನಿಮಾ ಕೂಡ ಡಿಫರೆಂಟ್ ಆಗಿದೆಯಂತೆ. ನಾಲ್ವರು ಯವುಕರ ಸುತ್ತ ಸುತ್ತೋ ಕಥೆ ಇದಾಗಿದೆ. ಇನ್ನು ಸಿನಿಮಾದಲ್ಲಿ ಯುವತಿಯರಿಗೊಂದು ಮೆಸೇಜ್ ನೀಡಲಾಗಿದೆಯಂತೆ. 
 
ಈಗಾಗ್ಲೇ ಟ್ರೇಲರ್ , ಸಾಂಗ್ಸ್ ನಿಂದ ಸದ್ದು ಮಾಡುತ್ತಿರುವ ಈ ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ನೇಹಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಆಯುಷ್ ಸಿನಿಮಾದ ನಾಯಕ. ಆನಂದ್ ಜಿ ಕೆ  ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಂಗಮೇಶ್ ಹಳಗಟ್ಟಿ ಹಾಗೂ ಮಹಾದೇವ್ ಹಳಗಟ್ಟಿ ನಿರ್ಮಾಣದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ನೋಬಿನ್ ಪೌಲ್ ಸಂಗೀತ ಸಂಯೋಜಿಸಿದ್ದಾರೆ.

Share this Story:

Follow Webdunia kannada