Select Your Language

Notifications

webdunia
webdunia
webdunia
webdunia

ಏಕಕಾಲಕ್ಕೆ 24 ಪಾತ್ರಗಳಲ್ಲಿ ನಟಿಸುತ್ತಿರುವ ಟೈಟಾನಿಕ್ ಹೀರೋ

ಏಕಕಾಲಕ್ಕೆ 24 ಪಾತ್ರಗಳಲ್ಲಿ ನಟಿಸುತ್ತಿರುವ ಟೈಟಾನಿಕ್ ಹೀರೋ
, ಗುರುವಾರ, 5 ಮಾರ್ಚ್ 2015 (10:06 IST)
ಹಾಲಿವುಡ್ ನಲ್ಲಿ ಯಾವುದೇ ಚಿರ್ತ್ರವನ್ನು ತಯಾರಿಸಿದರೂ ಸಹಿತ ಅದು ಹೆಚ್ಚಿನ ಸುದ್ದಿ ಮಾಡುತ್ತದೆ. ಅದು ಕಾರ್ಟೂನ್, ಅನಿಮೇಶನ್ ಏನೇ ಆಗಿರಲಿ ಸುದ್ದಿಗೇನೂ ಬರವಿಲ್ಲ. ಈಗ ವಿಷಯಕ್ಕೆ ಬರುವುದಾದರೆ ಹಾಲಿವುಡ್ ನಾಯಕ ನಟ 24 ಪಾತ್ರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೊದಲು ಹಿಂದಿ ಚಿತ್ರ ಒಂದರಲ್ಲಿ ದಿವಂಗತ ಸಂಜೀವ್ ಕುಮಾರ್ ಅವರು ಅನೇಕ ಪಾತ್ರಗಳನ್ನೂ ಒಂದೇ ಚಿತ್ರದಲ್ಲಿ ಮಾಡಿ ತೋರಿಸಿದ್ದರು. ಟಾಲಿವುಡ್ ಹಿರಿಯ ಕಲಾವಿದ  ದಿವಂಗತ  ಅಕ್ಕಿನೇನಿ ನಾಗೇಶ್ವರ್  ರಾವ್ ಅವರು ಒಂಬತ್ತು ಪಾತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ ತಮಿಳು ಉಳಗನಾಯಗನ್ ಕಮಲ್ ಹಾಸನ್ ಅವರು ದಶಾವತಾರದ ಮೂಲಕ ಜನರ ಮುಂದೆ ಬಂದಿದ್ದರು. ಆದರೆ ಹಾಲಿವುಡ್ ನಟ ಎರಡು ಡಜನ್ ಪಾತ್ರಗಳನ್ನೂ ಒಂದೇ ಸಿನಿಮಾದಲ್ಲಿ ಮಾಡುತ್ತಿದ್ದಾರೆ. 
ಹಾಲಿವುಡ್‌ನಲ್ಲಿ ಈ ರೀತಿ ಒಂದೇ ಸಮನೆ 24ಪಾತ್ರಗಳನ್ನೂ ಮಾಡುತ್ತಿರುವ ಕಲಾವಿದ ಟೈಟಾನಿಕ್ ಫೇಮ್ ಲಿಯೋನಾರ್ದೋ ಡಿಕಾಪ್ರಿಯಾ. ಈ ಹೀರೋ ಒಂದೇ ಚಿತ್ರದಲ್ಲಿ ಬರೋಬ್ಬರಿ 24 ಪಾತ್ರಗಳಲ್ಲಿ ಕಂಡು ಬರುತ್ತಿದ್ದಾರೆ. ಈ ಮೂಲಕ ಚರಿತ್ರೆ ಸೃಷ್ಟಿ ಮಾಡುತ್ತಿದ್ದಾರೆ. ಕ್ರೌಡೆಡ್ ರೂಂ ಎನ್ನುವ ಹೆಸರಿನ ಚಿತ್ರದಲ್ಲಿ ತಾವು ಹೀಗೆ ನಟಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಈ ನಟ. 1981  ರಲ್ಲಿ ಪ್ರಕಟಗೊಂಡಿದ್ದ ಪ್ರಸಿದ್ಧ ಕಾದಂಬರಿಯಾಧಾರಿತ ಚಿತ್ರವಾಗಿದೆ ಇದು. ಯಾವ ರೇಂಜ್‌ನಲ್ಲಿ ಜನರನ್ನು ಆಕರ್ಷಿಸುತ್ತದೆ ಎನ್ನುವುದು ಬಿಡುಗಡೆಯಾದ ಬಳಿಕವಷ್ಟೇ ಗೊತ್ತಾಗುವ ಸತ್ಯವಾಗಿದೆ.  

Share this Story:

Follow Webdunia kannada