Webdunia - Bharat's app for daily news and videos

Install App

ಕಿಚ್ಚ ಸುದೀಪ್ ಸ್ಥಾನದಲ್ಲಿ ಮುಂದಿನ ವರ್ಷ ಬಿಗ್ ಬಾಸ್ ಹೋಸ್ಟ್ ಮಾಡುವವರು ಇವರೇ

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (09:22 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಮುಂದಿನ ವರ್ಷದಿಂದ ಹೋಸ್ಟ್ ಆಗಿ ನಾನು ಇರಲ್ಲ ಎಂದು ಕಿಚ್ಚ ಸುದೀಪ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಅವರ ಸ್ಥಾನಕ್ಕೆ ಯಾರು ಬರಬಹುದು ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.

ಕಿಚ್ಚ ಸುದೀಪ್ ಕಂಚಿನ ಕಂಠ, ಅವರ ಗತ್ತಿಗೆ ಸರಿ ಸಾಠಿಯಾಗುವಂತಹ ನಿರೂಪಕರನ್ನೇ ಕಲರ್ಸ್ ತರಬೇಕಿದೆ. ಇಲ್ಲದೇ ಹೋದರೆ ಬಿಗ್ ಬಾಸ್ ನಿರೂಪಣೆ ಸಪ್ಪೆಯಾಗಲಿದೆ. ಹೀಗಾಗಿ ಅವರಷ್ಟೇ ಸ್ಟಾರ್ ವಾಲ್ಯೂ ಇರುವ ವ್ಯಕ್ತಿಗಳನ್ನೇ ಕಲರ್ಸ್ ಹುಡುಕಬೇಕಾಗುತ್ತದೆ. ಈ ನಡುವೆ ಅಭಿಮಾನಿಗಳು ಒಂದು ಸಲಹೆ ನೀಡುತ್ತಿದ್ದಾರೆ.

ಕಿಚ್ಚ ಸುದೀಪ್ ಸ್ಥಾನ ತುಂಬಬೇಕೆಂದರೆ ಬಿಗ್ ಬಾಸ್ ನಿರೂಪಣೆಗೆ ಶಿವರಾಜ್ ಕುಮಾರ್ ಅವರೇ ಸರಿ ಎನ್ನುತ್ತಿದ್ದಾರೆ. ಕಿಚ್ಚ ಸುದೀಪ್ ರಂತೇ ಶಿವಣ್ಣ ಎದುರು ನಿಂತು ಘರ್ಜಿಸಿದರೆ ಎದುರಾಳಿಗಳು ಸೈಲೆಂಟ್ ಆಗಲೇಬೇಕು. ಇಡೀ ಕನ್ನಡ ಇಂಡಸ್ಟ್ರಿಗೇ ಅಣ್ಣನಂತಿರುವ ಶಿವಣ್ಣನೇ ಬಿಗ್ ಬಾಸ್ ನಿರೂಪಣೆಗೆ ಸರಿಯಾದ ವ್ಯಕ್ತಿ ಎಂದು  ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

ಶಿವಣ್ಣ ಸದ್ಯಕ್ಕೆ ಜೀ ಕನ್ನಡ ವಾಹಿನಿಯ ಡಿಕೆಡಿ ಶೋ ತೀರ್ಪುಗಾರರಾಗಿದ್ದಾರೆ. ಕಿರುತೆರೆಯಲ್ಲಿ ಕೆಲವೊಂದು ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕಿರುತೆರೆ ಹೊಸದೇನಲ್ಲ. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರೇ ಮುಂದಿನ ಆವೃತ್ತಿಯಿಂದ ಬಿಗ್ ಬಾಸ್ ನಿರೂಪಣೆ ಮಾಡಿದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ: video

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ದರ್ಶನ್ ಪರ ಅಖಾಡಕ್ಕಿಳಿದ ವಿಜಯಲಕ್ಷ್ಮಿ, ಅಭಿಮಾನಿಗಳಿಗೆ ಕಳುಹಿಸಿದ್ರು ಸ್ಪಷ್ಟ ಸಂದೇಶ

ಬಿಗ್‌ಬಾಸ್‌ ವಿನ್ನರ್‌, ಯುಟ್ಯೂಬರ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳಿಂದ ಗುಂಡಿನ ಮಳೆ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಮುಂದಿನ ಸುದ್ದಿ
Show comments