Webdunia - Bharat's app for daily news and videos

Install App

ತಿಂಗಳಾಂತ್ಯಕ್ಕೆ ಬೆಂಗಳೂರು 560023 ಸಿನಿಮಾ ರಿಲೀಸ್

Webdunia
ಸೋಮವಾರ, 12 ಅಕ್ಟೋಬರ್ 2015 (11:15 IST)
ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್ ವುಡ್ ಅಂಗಳದಲ್ಲಿ ಸುದ್ದಿ ಮಾಡುತ್ತಲೇ ಬಂದಿರುವ ಸಿನಿಮಾ ಬೆಂಗಳೂರು 560023. ಇದೀಗ ತನ್ನ ಅಫಿಶೀಯಲ್ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಸಿನಿಮಾದ ಟ್ರೇಲರ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ.
ಏರಿಯಾ ಒಂದರ ಕ್ರಿಕೆಟ್ ಟೀಮ್ ನ ಸುತ್ತ ಹೆಣೆದಿರುವ ಕಥೆಯೊಂದನ್ನು ಆಧರಿಸಿ ಸಿನಿಮಾ ಮಾಡಲಾಗಿದ್ದು, ಸಿನಿಮಾದಲ್ಲಿ ಯುವ ಪ್ರತಿಭೆಗಳ ದಂಡೇ ಇದೆ. ಈಗಾಗಲೇ ಸಿಸಿಎಲ್ ಕ್ರಿಕೆಟ್ ನಲ್ಲಿ ಮಿಂಚಿರುವ ಜಯರಾಮ್ ಕಾರ್ತೀಕ್, ರಾಜೀವ್,ಧ್ರುವ ಹಾಗೇ ಚಿಕ್ಕಣ್ಣ, ಚಂದನ್ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿಸಿಎಲ್ ನಲ್ಲಿದ್ದ ಯುವಕರೇ ಸಿನಿಮಾದಲ್ಲಿರೋದರಿಂದ ಕಿಚ್ಚ ಸುದೀಪ್ ಸಿನಿಮಾ ಇಂಟ್ರೋಡಕ್ಷನ್ ಪಾರ್ಟ್ ಗೆ ತಾವೇ ಧ್ವನಿ ನೀಡಿದ್ದಾರೆ.
 
ಸಿನಿಮಾವನ್ನು ಕಿರಾತಕ ಸಿನಿಮಾದ ನಿರ್ದೇಶಿಸಿದ್ದ ಪ್ರದೀಪ್ ನಿರ್ದೇಸಿಸಿದ್ದು, ಅರುಣ್ ಆಡ್ಯೂವ್ ಸಂಗೀತ ಸಂಯೋಜಿಸಿದ್ದಾರೆ, ಸಿನಿಮಾದಲ್ಲಿರುವ ರೋಮ್ಯಾಂಟಿಕ್ ಹಾಡು ನನ್ನವಳೇ ಚೆಲುವೆಗೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ಈ ಹಾಡನ್ನು ಸೋನು ಕೇವಲ ಒಂದೇ ಟೇಕ್ ನಲ್ಲಿ ಹಾಡಿದ್ದಾರಂತೆ. ಈಗಾಗಲೇ ಟ್ರೇಲರ್ ನಿಂದ ಕುತೂಹಲ ಮೂಡಿಸಿರುವ ಈ ಸಿನಿಮಾ ಎಲ್ಲಾ ಅಂದುಕೊಂಡಂತೆ ಆದ್ರೆ ಈ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments