Webdunia - Bharat's app for daily news and videos

Install App

ಬಾಹುಬಲಿ ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು!

Webdunia
ಶನಿವಾರ, 8 ಜುಲೈ 2017 (10:19 IST)
ಹೈದರಾಬಾದ್: ಬಾಹುಬಲಿ ಸೂಪರ್ ಹಿಟ್ ಆಗುವುದರೊಂದಿಗೆ ನಾಯಕ ಪ್ರಭಾಸ್ ಗೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆ ಶುರುವಾಯ್ತು. ಈ ನಟನ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಏರಿದವು. ಪ್ರಭಾಸ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳಿವೆ ನೋಡಿ.


ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ 5 ವರ್ಷ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುತ್ತದೆ. ಆ ಒಂದು ಸಿನಿಮಾಗೆ ತೂಕ ಹೆಚ್ಚಿಸಿಕೊಳ್ಳಲು ಪ್ರಭಾಸ್ ದಿನವೊಂದಕ್ಕೆ 30 ರಿಂದ 40 ಬೇಯಿಸಿದ ಮೊಟ್ಟೆ ತಿನ್ನುತ್ತಿದ್ದರಂತೆ. ಸಿನಿಮಾ ಎಲ್ಲಾ ಮುಗಿದ ಮೇಲೆ ಒಂದು ತಿಂಗಳು ಡಯಟ್ ಮಾಡದೇ ಇರಲು ಪ್ರಭಾಸ್ ನಿರ್ಧರಿಸಿದ್ದರಂತೆ.

ಅದೂ ಸಾಲದ್ದಕ್ಕೆ ಮನೆಯಲ್ಲೇ 1.5 ಕೋಟಿ ರೂ. ವೆಚ್ಚದಲ್ಲಿ ಜಿಮ್ ನಿರ್ಮಿಸಿಕೊಂಡಿದ್ದರಂತೆ. ಆ ಮೂಲಕ ದೇಹ ದಂಡಿಸಿಕೊಂಡು ಮೈಹುರಿಗೊಳಿಸಿದರಂತೆ. ಶಿವುಡು ಸಾದಾ ಸೀದಾ ಕ್ಯಾರೆಕ್ಟರ್ ಆಗಿದ್ದರಿಂದ ಅವರಿಗೆ ನಟನೆ ಸುಲಭವಾಗಿತ್ತಂತೆ. ಆದರೆ ಅಮರೇಂದ್ರ ಬಾಹುಬಲಿ ಪಾತ್ರ ನಿಭಾಯಿಸುವುದು ಕಷ್ಟವಾಗಿತ್ತಂತೆ.

ಅನುಷ್ಕಾ ಜತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರಭಾಸ್ ಗೆ ಆಕೆಯೇ ಮೆಚ್ಚಿನ ಸಹ ನಟಿಯಂತೆ. ಇನ್ನು ನಿರ್ದೇಶಕರ ಪೈಕಿ ಬಂದರೆ ಪ್ರಭಾಸ್ ಕಣ್ಣು ಮುಚ್ಚಿಕೊಂಡು ಓಕೆ ಎನ್ನುವುದು ರಾಜ್ ಕುಮಾರ್ ಹಿರಾನಿಗೆ. ಹಿರಾನಿ ನಿರ್ದೇಶನದ ಎಲ್ಲಾ ಸಿನಿಮಾಗಳೂ ಪ್ರಭಾಸ್ ಗೆ ಅಚ್ಚುಮೆಚ್ಚು. ಸೂಪರ್ ಹೀರೋಗಳ ಕ್ಯಾರೆಕ್ಟರ್ ಎಂದರೆ ಬಾಹುಬಲಿಗೆ ಇಷ್ಟವಂತೆ.

ಹೀರೋ ಆಗಿದ್ದರೂ, ಗದ್ದಲಗಳಿಲ್ಲದೇ ಪರಿಸರದ ಮಡಿಲಲ್ಲಿ ತಣ್ಣಗಿರುವುದು ಅವರಿಗಿಷ್ಟವಂತೆ. ಅದೇ ಕಾರಣಕ್ಕೆ ಅವರ ಮನೆಯಲ್ಲಿ ಒಂದು ಗಾರ್ಡನ್ ಬೆಳೆಸಿದ್ದು, ಅಲ್ಲಿ ಹಲವು ಜಾತಿಯ ಪಕ್ಷಿಗಳಿವೆಯಂತೆ. ಅಷ್ಟೇ ಅಲ್ಲದೆ, ಪುಸ್ತಕಗಳ ಪ್ರೇಮಿಯಾಗಿರುವ ಪ್ರಭಾಸ್ ಮನೆಯಲ್ಲಿ ಲೈಬ್ರರಿಯೂ ಇದೆಯಂತೆ!

 
ಇದನ್ನೂ ಓದಿ.. ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೊಂದು ಸಿನಿಮಾ ಘೋಷಿಸಿದ ರಿಷಭ್ ಶೆಟ್ಟಿ: ನೆಟ್ಟಿಗರಿಂದ ಆಕ್ಷೇಪ

ಯುವ ಪತ್ನಿ ವಿಚಾರವೆತ್ತಿದ್ದಕ್ಕೆ ರೊಚ್ಚಿಗೆದ್ದ ದೊಡ್ಮನೆ ಫ್ಯಾನ್ಸ್

ರಮ್ಯಾ, ಪ್ರಥಮ್ ಡಿಬಾಸ್ ಫ್ಯಾನ್ಸ್ ವಾರ್ ಆಗ್ತಿದ್ದರೆ ದರ್ಶನ್ ಎಲ್ಲಿದ್ದಾರೆ ಗೊತ್ತಾ

ಸುಮ್ಮನೇ ಬಿಡುವ ಮಾತೇ ಇಲ್ಲ: ದರ್ಶನ್ 43 ಅಭಿಮಾನಿಗಳಿಗಾಗಿ ಹುಡುಕಾಟ

ರಮ್ಯಾಗೆ ಫ್ಯಾನ್ಸ್ ಅಶ್ಲೀಲ ಮೆಸೇಜ್ ನಿಂದ ಸಂಕಷ್ಟಕ್ಕೆ ಸಿಲುಕುತ್ತಾರಾ ದರ್ಶನ್

ಮುಂದಿನ ಸುದ್ದಿ
Show comments