ತನಗಿಂತ ಕಿರಿಯ ಯುವಕನನ್ನು 3ನೇ ಮದುವೆಯಾದ 42ನೇ ವರ್ಷದ ನಟಿ

Sampriya
ಸೋಮವಾರ, 27 ಮೇ 2024 (19:37 IST)
Photo Courtesy X
ಕೊಯಮತ್ತೂರು: ಮಲಯಾಳಂನ ಕಿರುತೆರೆ ಹಾಗೂ ಖ್ಯಾತ ನಟಿ ಮೀರಾ ವಾಸುದೇವನ್ ತನ್ನ 42ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಅವರು ತನಗಿಂತ 6 ವರ್ಷ ಕಿರಿಯ ಯುವಕನನ್ನು ವರಿಸಿದ್ದಾರೆ.

ಮಾಲಿವುಡ್‌ , ಕಾಲಿವುಡ್‌, ಟಾಲಿವುಡ್‌ , ಬಾಲಿವುಡ್‌ ಬಣ್ಣದ ಲೋಕದಲ್ಲಿ ಮಿಂಚಿರುವ ಮೀರಾ ವಾಸುದೇವನ್‌ ಉನ್ನೈ ಸರನಾದೈಂತೆನ್, ತನ್ಮಾತ್ರ ಮತ್ತು ಜೆರ್ರಿ ಮುಂತಾದ ಸಿನಿಮಾದಲ್ಲಿ ತನ್ನ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಇವರಿಗೆ ಕೇರಳ ರಾಜ್ಯ ಟಿವಿ ಪ್ರಶಸ್ತಿ ಮತ್ತು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಸಂದಿದೆ.

ವೈಯಕ್ತಿಕ ಜೀವನದ ವಿಚಾರದಲ್ಲೂ ಸುದ್ದಿಯಾದ ಮೀರಾ ಕಾಲಿವುಡ್‌ ನಟ ಜಾನ್ ಕೊಕ್ಕನ್ ಅವರೊಂದಿಗೆ ಮೊದಲು ಮದುವೆಯಾಗಿದ್ದರು. ಅವರಿಂದ ವಿಚ್ಚೇದನ ಪಡೆದು, ವಿಶಾಲ್ ಅಗರ್ವಾಲ್ ಅವರನ್ನು ಎರಡನೇ ವಿವಾಹವಾಗಿದ್ದರು. ಅವರಿಂದ ದೂರವಾದ ಬಳಿಕ ನಟಿ ಮೀರಾ ಇದೀಗ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನಾಗಿರುವ ವ್ಯಕ್ತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವರನ ಹೆಸರು ವಿಪಿನ್ ನಯಂಗಮ್. ಅವರು ಸಿನಿಮಾರಂಗದಲ್ಲಿ ಸಿನಿಮಾಟೋಗ್ರಾಫರ್ ಗುರುತಿಸಿಕೊಂಡಿದ್ದು, 2019 ರಲ್ಲಿ ಜೊತೆಯಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಮೀರಾ ಹೇಳಿಕೊಂಡಿದ್ದಾರೆ.

ನಟಿಯ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ಏ.21 ರಂದು ವಿವಾಹ ನಡೆದಿದ್ದು, ಫೋಟೋ, ವಿಡಿಯೋವನ್ನು ಮೀರಾ ಈಗ ಹಂಚಿಕೊಂಡಿದ್ದಾರೆ.  ನಾವು ದಂಪತಿಗಳಾಗಿ ಇಂದು ನೋಂದಣಿ ಮಾಡಿಕೊಂಡಿದ್ದೇವೆ ಎಂದು ಮೀರಾ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮೊನ್ನೆ ದೈವದ ಅನುಕರಣೆ, ಇಂದು ಜನರಲ್ಲಿ ಕ್ಷಮೆಯಾಚಿಸಿದ ರಣವೀರ್ ಸಿಂಗ್

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments