Webdunia - Bharat's app for daily news and videos

Install App

ಸನ್ನಿಗೆ ಆ ಹೀರೋ ಅಂದ್ರೆ...?!

Webdunia
ಸೋಮವಾರ, 30 ಮಾರ್ಚ್ 2015 (09:57 IST)
ತನ್ನ ಹರೆಯದ ರೂಪದ ಮಾದಕತೆಯ, ಸೌಂದರ್ಯದಿಂದ ಹಾಗೂ ಹೀಗೂ ಮತ್ತು ಹ್ಯಾಗೆ ಹ್ಯಾಗೋ  ಅಂದಿನ- ಹಿಂದಿನ ಮತ್ತು ಮುಂದಿನ ಪಡ್ಡೆ ಹೈಕಳುಗಳನ್ನು ಸತತವಾಗಿ ಆಕರ್ಷಿಸುತ್ತಿರುವ ನಟಿ ಸನ್ನಿ ಲಿಯೋನ್. ಆಕೆಗೆ ಈಗ ಕೈ ತುಂಬಾ ಕೆಲಸ ಸುಮಾರು ಆರು ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ ಈ ಚೆಲುವೆ. ಅತ್ಯಂತ  ಹಸಿಬಿಸಿ ನೋಟದ-ಮೈಮಾಟದ ಈ ಅರೆ ಬೆತ್ತಲೆ ಸುಂದರಿಗೆ ಆ ಹೀರೋ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ.  
ಆತನೆಂದರೆ ನನಗೆ ಅಷ್ಟು ಇಷ್ಟ ಅಂದಿರುವ ಆಕೆಯ ಆತ ಬೇರೆ ಯಾರು ಅಲ್ಲ ಸಲ್ಮಾನ್ ಖಾನ್. ಇಷ್ಟು ದಿನಗಳ ವರೆಗೆ ಅರೆಬೆತ್ತಲೆಯಾಗಿ ನಟಿಸುವತ್ತ ಗಮನ ನೀಡಿದ್ದ ಈತ ಈಗ ಬಟ್ಟೆ ಬರೆ ಧರಿಸಿ ನಟಿಸುತ್ತಿದ್ದಾರೆ. ಅಂತಹ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ಕಂಡ್ರೆ ಈಕೆಗೆ ಇಷ್ಟವಂತೆ. ಆತನ ಜೊತೆ ನಟಿಸ ಬೇಕು ಎನ್ನುವ ಮಹದಾಸೆ ಹೊಂದಿದ್ದಾಳೆ ಈ ತಾರೆ. ಈವರೆಗೂ ಸಣ್ಣ ಪುಟ್ಟ ಹೀರೋಗಳ ಜೊತೆ ನಟಿಸಿ ಸಾಕಾಗಿರ ಬಹುದು, ದೊಡ್ಡ ಹೀರೋಗಳು ಈಕೆಯತ್ತ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಆದರೆ ಸಲ್ಲು ಮಿಯ ಬಿಗ್ ಬಾಸ್ ನಾಯಕ ಆದ ಕಾರಣ ಆ ಒಂದು ಅಂಶದ ಅಡಿಯಲ್ಲಿ ಆಕೆಯ ಜೊತೆ ನಟಿಸಲು ಒಪ್ಪ ಬಹುದೇನೋ..? 
 
ಇದರ ನಡುವೆ ಆಕೆ ಸಂದರ್ಶನ ಒಂದರಲ್ಲಿ ಮಾತನಾಡುತ್ತ ಟಾಪ್ ಹೀರೋಗಳ ಧರ್ಮ ಪತ್ನಿಯರು ತಮ್ಮ ಪತಿಯನ್ನು ತನ್ನಜೋತೆ ಅಭಿನಯಿಸಲು ಸಮ್ಮತಿಸುತ್ತಿಲ್ಲ ಎನ್ನುವ ಮಾತನ್ನು ಹೇಳಿದ್ದಾಳೆ. ಮೊದಲು ತಾನು ವಯಸ್ಕರಿಗೆ ಕಾಮದ ಪಾಠ ಹೇಳಿ ಕೊಡ್ತಾ ಇದ್ದಂತಹ ಚಿತ್ರಗಳಲ್ಲಿ ನಟಿಸುತ್ತಿದ್ದೆ. ಅದಕ್ಕೆ ಈ ರೀತಿಯ ನಿರ್ಧಾರ ಕೈಗೊಂಡಿರ ಬಹುದು ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. ಆ ಮಾತು ಪರೋಕ್ಷವಾಗಿ ಹೀರೋಗಳ ಹೆಂಡತಿಯರನ್ನು ಬೈದಂತೆ ಇದೆ. ತನ್ನ ಜೊತೆ ನಟಿಸಿದರೆ ಎಲ್ಲಿ ಅವರ ಮಟ್ಟ ಕಡಿಮೆ ಆಗುತ್ತದೆಯೋ ಎಂದು ಹೀರೋಗಳ ಪತ್ನಿಯರಿಗೆ ಭಯ ಎಂದು ಸಹ ಹೇಳಿದ್ದಾಳೆ. ನಿನ್ನನ ಮಾತಲ್ಲೇ ಎಲ್ಲವು ಅಡಗಿರುವಾಗ ಆ ಬಡಪಾಯಿ ಹೆಂಡತಿಯರ ಮೇಲೇಕೆ ಹಾಟ್ ವ್ಯೂ ಸೆಕ್ಸಿ ಭಾಮೆ ?

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments