Select Your Language

Notifications

webdunia
webdunia
webdunia
webdunia

ಮತ್ತೆ ಒಂದಾದ ತಮನ್ನಾ-ನಾಗ ಚೈತನ್ಯ ಜೋಡಿ

ಮತ್ತೆ ಒಂದಾದ ತಮನ್ನಾ-ನಾಗ ಚೈತನ್ಯ ಜೋಡಿ
, ಬುಧವಾರ, 29 ಏಪ್ರಿಲ್ 2015 (10:19 IST)
ಟಾಲಿವುಡ್‌ನಲ್ಲಿ ತಮನ್ನಾಳನ್ನು ಮಿಲ್ಕಿ ಬ್ಯೂಟಿ ಎನ್ನುವ ಹೆಸರಿನಿಂದ ಕರೆಯುತ್ತಾರೆ ಆಕೆಯ ಅಭಿಮಾನಿಗಳು ಹಾಗಿ ಸಿನಿಮಂದಿ. ಈ ಮಿಲ್ಕಿ ಬ್ಯೂಟಿಗೆ ಈಗ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲದ ಕಾರಣ ಆಕೆಯ ವಜ್ರದ ವ್ಯಾಪಾರ ಮಾಡಲು ಸಿದ್ಧತೆ ನಡೆಸಿದ್ದಾಳೆ. ಈಗಾಗಲೇ ಅಕ್ಷಯ ತೃತೀಯ ದಿನದಂದು ಆಕೆ ವಜ್ರದ ಅಂಗಡಿಗಳನ್ನು ತೆರೆದು ಆಯ್ತು. ಈಗ ಸುದ್ದಿ ಅದಲ್ಲ. ಆಕೆ ಮತ್ತು ಟಾಲಿವುಡ್ ಮಿಲ್ಕಿ ಬಾಯ್ ನಾಗ ಚೈತನ್ಯ ನಟನೆಯ ಚಿತ್ರದಲ್ಲಿ ಆಕೆ ನಟಿಸುವ ಸಾಧ್ಯತೆಗಳು ಕೇಳಿ ಬರುತ್ತಿವೆ. 
ಚಂದು ಮೆಂಡೇಟಿ ಅವರ ನಿರ್ದೇಶನದಲ್ಲಿ ಈ ಚಿತ್ರದ ಚಿತ್ರೀಕರಣ ಕೆಲಸ ಸಾಗುತ್ತದೆ ಎನ್ನುವಸುದ್ದಿ ಇದೆ. ನಾಗ ಚೈತನ್ಯ ಚಿತ್ರದಲ್ಲಿ ತಮ್ಮುಳನ್ನು ನಾಯಕಿಯನ್ನಾಗಿ ಮಾಡುವ ಬಗ್ಗೆ ವಿಪುಲ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾದ ಕೆಲಸ ಸಾಗಿವೆಯಂತೆ. ಎಲ್ಲವೂ ನಿರೀಕ್ಷಿಸಿದಂತೆ ಆದಲ್ಲಿ ಚಿತ್ರ ಮುಂದಿನ  ತಿಂಗಳಲ್ಲಿ ಆರಂಭವಾಗುತ್ತದೆ.ಈ ಮೂಲಕ ಈ ಜೋಡಿ ಮೂರನೆಯ ಬಾರಿ ಒಟ್ಟಿಗೆ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.  
 
ಇದು 100ಕ್ಕೆ 100ರಷ್ಟು ಲವ್ ಸ್ಟೋರಿಯಂತೆ. ಭಾವ ನಾದಿನಿಯ ಸುತ್ತ ನಡೆಯುವ ಕಥೆ ಇದಾಗಿದ್ದು. ಭಾವ ಹಾಗೂ ನಾದಿನಿ ಈ ರೀತಿ ಇರ ಬೇಕು ಎನ್ನುವ ರೀತಿಯಲ್ಲಿ ಚಿತ್ರವನ್ನು ತಯಾರು ಮಾಡುತ್ತಿದ್ದಾರಂತೆ. ಈವರೆಗೂ ಇವರಿಬ್ಬರು ನಟಿಸಿರುವ ಚಿತ್ರಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅತ್ಯದ್ಭುತವಾಗಿ ವರ್ಕ್ ಔಟ್ ಆಗಿದ್ದು, ಈ ಚಿತ್ರದಲ್ಲೂ ಸಹಿತ ಅದರ ಹವಾ ಮುಂದುವರೆಯುತ್ತದೆ ಎನ್ನುವ ನಂಬಿಕೆ ಹೊಂದಿದ್ದಾರೆ ಚಿತ್ರತಂಡ. 

Share this Story:

Follow Webdunia kannada