Select Your Language

Notifications

webdunia
webdunia
webdunia
webdunia

ಟೆಂಪರ್ ಹಿಂದಿಯಲ್ಲಿ ರೀಮೇಕ್‌: ನಾಯಕನಾಗಿ ರಣವೀರ್ ಸಿಂಗ್ ಆಯ್ಕೆ

ಟೆಂಪರ್ ಹಿಂದಿಯಲ್ಲಿ ರೀಮೇಕ್‌: ನಾಯಕನಾಗಿ ರಣವೀರ್ ಸಿಂಗ್ ಆಯ್ಕೆ
, ಗುರುವಾರ, 26 ಫೆಬ್ರವರಿ 2015 (11:58 IST)
ಇತ್ತೀಚಿಗೆ ತೆಲುಗು ಚಿತ್ರ ಟೆಂಪರ್ ಬಿಡುಗಡೆ ಆಯ್ತು. ಆ ಚಿತ್ರ ಜೂನಿಯರ್ ಎಂಟಿಆರ್ ಅವರಿಗೆ ಜೀವದಾನ ಮಾಡಿದೆ. ಅವರ ನಟನೆಯ, ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಚಿತ್ರ ಮಕಾಡೆ ಮಲಗಿತ್ತು. ಅದಾದ ಬಳಿಕ ಅವರು ಕಾಜಲ್ ಅಗರ್ ವಾಲ್ ಜೊತೆ ಟೆಂಪರ್‌ನಲ್ಲಿ ನಟಿಸಿದ್ದರು ಆ ಚಿತ್ರವೂ ಈಗ ಉತ್ತಮ ಪ್ರತಿಕ್ರಿಯೆ ಹೊಂದಿದ್ದು, ಹಣ ಗಳಿಕೆಯಲ್ಲಿ ಸಹಿತ ಸಾಕಷ್ಟು ಸುದ್ದಿ ಮಾಡುತ್ತಿದೆ. 
ಸಾಮಾನ್ಯವಾಗಿ ಯಾವುದೇ ಯಶಸ್ವಿ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡುವ ವಿಷಯದಲ್ಲಿ ಹಿಂದಿ ಜನ ಸದಾ ಮುಂದೆ. ಈಗ ಸಹಿತ ಟೆಂಪರ್‌ಗೂ ಅದೇ ರೀತಿಯ ಡಿಮ್ಯಾಂಡ್ ಬಂದಿದೆ. ಆ ಚಿತ್ರದ ಹಕ್ಕುಗಳನ್ನು ಹಿಂದಿ ನಿರ್ಮಾಪಕರು ಪಡೆದಿದ್ದು, ಅದನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದ ನಿರ್ಮಾಣದ ಹಕ್ಕನ್ನು ನಿರ್ಮಾಪಕ ಬಂಡ್ಲ  ಗಣೇಶ ಅವರ ಸ್ನೇಹಿತ ಸಚಿನ್ ಪಡೆದಿದ್ದಾರೆ. ಸಚಿನ್ ಜೋಷಿ ಸನ್ನಿ ಲಿಯೋನ್ ಜೊತೆ  ಬಿ ಗ್ರೇಡ್ ಸಿನಿಮಾದಲ್ಲಿ ನಟಿಸಿರುವ ನಾಯಕ. ಈಗ ಅವರು ಟೆಂಪರ್ ರೈಟ್ಸ್ ತೆಗೆದು ಕೊಂಡಿದ್ದಾರೆ. ಇದರಲ್ಲಿ ಖುದ್ದು ಸಚಿನ್ ನಟಿಸದೆ ರಣವೀರ್ ಸಿಂಗ್ ಅವರಿಗೆ ಅವಕಾಶ ನೀಡುತ್ತಿರುವ ಬಗ್ಗೆ ಸುದ್ದಿ ಹೊರ ಬಂದಿದೆ. ಇದರ ಅನ್ವಯ ರಣವೀರ್ ತನ್ನ ಕಟ್ಸ್, ಬೈಸೆಪ್ಸ್, ಪ್ಯಾಕ್ಸ್ ಚಿತ್ರದಲ್ಲಿ ತೋರಿಸ ಬಹುದಾಗಿದೆ. 
 
ಇಷ್ಟೆಲ್ಲಾ ಆದರೂ ಸಚಿನ್ ಅಧಿಕೃತವಾಗಿ ಮಾಧ್ಯಮಗಳಿಗೆ ಹೇಳಿಲ್ಲ, ಆದರೆ ಸುದ್ದಿ ಮೂಲಗಳು ಸ್ಪಷ್ಟವಾಗಿ ರಣವೀರ್ ಸಹಿನ್ ಚಿತ್ರದ ಹೀರೋ ಎಂದು ಹೇಳುತ್ತಿವೆ. ಏನೇ ಆದರೂ ಸಧ್ಯದಲ್ಲೇ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸುದ್ದಿಗಳು ಹೊರ ಬೀಳಲಿವೆ. ತೆಲುಗು ವರ್ಶನ್ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು.   

Share this Story:

Follow Webdunia kannada