Select Your Language

Notifications

webdunia
webdunia
webdunia
webdunia

ಶಿವಣ್ಣ, ಸುದೀಪ್ ಅಭಿನಯದ ವಿಲನ್ ಟೀಸರ್ ಶೂಟಿಂಗ್

ಶಿವಣ್ಣ, ಸುದೀಪ್ ಅಭಿನಯದ ವಿಲನ್ ಟೀಸರ್ ಶೂಟಿಂಗ್
Bangalore , ಸೋಮವಾರ, 23 ಜನವರಿ 2017 (16:58 IST)
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿರುವ ಸಿನಿಮಾ ’ದಿ ವಿಲನ್’. ಜೋಗಿ ಪ್ರೇಮ್ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸ್ಯಾಂಡಲ್‍ವುಡ್‌ನಲ್ಲಿ ಕುತೂಹಲ ಮೂಡಿಸಿದೆ.
 
ಸದ್ಯಕ್ಕೆ ಚಿತ್ರದ ಟೀಸರ್ ಚಿತ್ರೀಕರಣ ನಡೆಯುತ್ತಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದ್ದಾರೆ. ಪ್ರೇಮ್ ಸಿನಿಮಾ ಎಂದರೆ ಪ್ರಚಾರಕ್ಕೆ ಯಾವುದೇ ಕೊರತೆ ಇರಲ್ಲ. ಸುದೀಪ್ ಅವರು ಬಿಗ್ ಬಾಸ್‍ನಲ್ಲಿ ಬಿಜಿಯಾಗಿರುವ ಕಾರಣ ಶಿವಣ್ಣ ಮಾತ್ರ ಟೀಸರ್ ಚಿತ್ರೀಕರಣಕ್ಕೆ ಆಗಮಿಸಿದ್ದರು.
 
ಆರು ವರ್ಷಗಳ ಗ್ಯಾಪ್ ಬಳಿಕ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಶಿವಣ್ಣ ಜತೆಗಿನ 100ನೇ ಸಿನಿಮಾ ಜೋಗಯ್ಯ ಬಳಿಕ ಹಲವಾರು ಚಿತ್ರಗಳನ್ನು ಪ್ರೇಮ್ ನಿರ್ದೇಶಿಸಿದ್ದಾರೆ. ಸಿ.ಆರ್.ಮನೋಹರ್ ನಿರ್ಮಿಸುತ್ತಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸಿನಿಮಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಮಿಸ್ ಯೂನಿವರ್ಸ್‌ಗೆ ಹೊರಟ ಸುಶ್ಮಿತಾ ಸೇನ್