ಪತ್ನಿ ಸೋನಲ್ ಜತೆ ಹಾಸನಾಂಬೆ ದರ್ಶನ ಪಡೆದ ತರುಣ್‌, ದರ್ಶನ್‌ಗಾಗಿ ಹರಕೆ ಹೊತ್ರಾ ಸ್ಟಾರ್‌ ದಂಪತಿ

Sampriya
ಭಾನುವಾರ, 27 ಅಕ್ಟೋಬರ್ 2024 (16:49 IST)
Photo Courtesy X
ಹಾಸನಾಂಬೆ ಎದುರು ದರ್ಶನ್‌ಗಾಗಿ ಪ್ರಾರ್ಥನೆ! 'ಕಾಟೇರ'ನಿಗಾಗಿ ಹರಕೆ ಹೊತ್ರಾ ತರುಣ್ ಸುಧೀರ್ ದಂಪತಿ?

ವರ್ಷಕ್ಕೆ 9 ದಿನಗಳ ಕಾಲ ಮಾತ್ರ ತೆರೆದಿರುವ ಹಾಸನಾಂಬೆ ದೇವಿಯ ದರ್ಶನವನ್ನು ಪಡೆಯಲು ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ನಿತ್ಯ ಜನಸಾಗರವೇ ಹರಿದು ಬರ್ತಿದೆ. ಇಂದು ಕನ್ನಡದ ಸ್ಟಾರ್ ದಂಪಿಯಾದ ತರುಣ್ ಸುಧೀರ್ ಹಾಗೂ ಸೋನಲ್ ಅವರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆದರು. ನಟ ದರ್ಶನ್ ಆಪ್ತರಾಗಿರೋ ತರುಣ್ ಸುಧೀರ್, ದೇವಿ ಬಳಿ ದರ್ಶನ್‌ಗೆ ಒಳ್ಳೆಯದಾಗಲಿ ಎಂದು  ಪ್ರಾರ್ಥನೆ ಮಾಡಿಕೊಂಡಿದ್ದಾರೆ. ನಟ ದರ್ಶನ್ ಬಗ್ಗೆ ಕಾಟೇರ ನಿರ್ದೇಶಕ ಹೇಳಿದ್ದೇನು?

ಜೈಲು ಸೇರಿರುವ ನಟ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ತರುಣ್, ಈ ದಿನ ದೇವಿಯ ಬಳಿ ದರ್ಶನ್ ಅವರಿಗಾಗಿಯೇ ಪ್ರಾರ್ಥನೆ ಮಾಡಿದ್ದಾಗಿ ಹೇಳಿದ್ದಾರೆ. ದೇವಿ ದರ್ಶನದ ಬಳಿಕ ಮಾತನಾಡಿದ ಅವರು, ಮದುವೆ ಆದ ಬಳಿಕ ಮೊದಲ ಬಾರಿ ಹಾಸನಾಂಬೆ ದರ್ಶನ ಪಡೆದಿದ್ದು ವಿಶೇಷ ಎನಿಸಿತು. ಎಲ್ಲರಿಗೂ ಆ ದೇವಿ ಒಳ್ಳೆಯದು ಮಾಡಲಿ.

ಜೀವನಪೂರ್ತಿ ಹೀಗೇ ಖುಷಿಯಾಗಿ ಇರಬೇಕು ಎಂದು ಕೇಳಿಕೊಳ್ಳುತ್ತೇನೆ. ಬೇಸರದ ವಿಚಾರದ ಅಂದ್ರೆ ಈ ಬಾರಿ ದರ್ಶನ್ ಸರ್ ನಮ್ಮ ಜೊತೆ ಬಂದಿಲ್ಲ. ಹೊರಗೆ ಇದ್ದಿದ್ರೆ ಅವರೂ ಕೂಡ ಹಾಸನಾಂಬೆ ದರ್ಶನ ಪಡೆಯಲು ಬರುತ್ತಿದ್ರು. ಅವರು ಬೇಗ ಹೊರಬರಲಿ ಎಂದು ನಾನು ಕೇಳಿಕೊಂಡಿದ್ದೇನೆ ಎಂದು ತರುಣ್ ಸುಧೀರ್ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ಮುಂದಿನ ಸುದ್ದಿ
Show comments