Select Your Language

Notifications

webdunia
webdunia
webdunia
webdunia

ಕನ್ನಡ ಸೂಪರ್ ಸ್ಟಾರ್ ಅಪ್ಪು ಜೊತೆ ನಟಿಸಲು ಒಲ್ಲೆ ಎಂದ ಫ್ಲಾಪ್ ನಟಿ ತಮ್ಮು

ಕನ್ನಡ ಸೂಪರ್  ಸ್ಟಾರ್ ಅಪ್ಪು ಜೊತೆ ನಟಿಸಲು ಒಲ್ಲೆ ಎಂದ ಫ್ಲಾಪ್ ನಟಿ ತಮ್ಮು
, ಬುಧವಾರ, 26 ನವೆಂಬರ್ 2014 (10:13 IST)
ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಸ್ವಲ್ಪ ಮಟ್ಟಿನ ಗೆಲುವು ಪಡೆದಿದ್ದ ನಟಿ ತಮನ್ನಾ ಭಾಟಿಯ. ತಾನು ಲಕ್ಕಿ ಗರ್ಲ್ ಎಂದು ಬಾಲಿವುಡ್ ಕಡೆಗೆ ಹೊರಟಳು. ಚಂದ, ಮಾದಕತೆ ಎಲ್ಲಾ ಇದ್ದರು ಸಹಿತ ಪಾಪಾ ಅದೃಷ್ಟ ಇರದ ಕಾರಣ ಆಕೆ ನಟಿಸಿದ್ದ ಚಿತ್ರಗಳು ಮಕಾಡೆ ಮಲಗಿ ಬಿಡ್ತು.
ಅಷ್ಟೇ ಅಲ್ಲದೆ ತನಗೆ ಇನ್ನು ಬಾಲಿವುಡ್ ಬಿಟ್ರೆ ಬೇರೇನೂ ಬೇಕಿಲ್ಲ ಎಂದು ಹೊರಟವಳು ಸಿಕ್ಕ ಅವಕಾಶಗಳನ್ನು ಕೈ ಬಿಟ್ಟ ಕಾರಣ ಈಗ ಟಾಲಿವುಡ್ ನಲ್ಲೂ ಸಹಿತ ಕ್ಯಾರೆ ಅನ್ನುತ್ತಿಲ್ಲ. ಹೀಗೆ ಜೀವದಾನಕ್ಕೆ ಕಾಯುತ್ತಿರುವ ತಮನ್ನಾಗೆ  ಒಂದು ಹೊಸ ಬದುಕು ನೀಡುತ್ತಿದ್ದರು ಕನ್ನಡದ ಮಂದಿ. ಆದರೆ ಆಕೆ ಆ ಅವಕಾಶ ದೂರ ತಳ್ಳಿದ್ದಾಳೆ. ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ದೊಡ್ಡ ಮನೆಯಲ್ಲಿ ನಟಿಸಲು ಆಹ್ವಾನ ನೀಡಿದರು  ಒಲ್ಲೆ ಎಂದು ದೂರ ಹೋಗಿದ್ದಾಳೆ.  
 
ಹಿಮ್ಮತ್ ವಾಲ್, ಹಮ್ಷಕಲ್ ಮತ್ತು ಎಂಟರ್ ಟೈನ್ ಮೆಂಟ್ ಅಲ್ಲದೆ ತೆಲುಗು ಆಗಡು  ಈಕೆ ನಟಿಸಿದ್ದ ಇತ್ತೀಚಿನ ಚಿತ್ರಗಳು. ಆ ಮೂರು ಚಿತ್ರಗಳು ಹೇಳ ಹೆಸರಿಲ್ಲದೆ ಸೋತು ಹೈರಾಣಾಗಿದ್ದು ಈ ಸಮಯದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ತಮಿಳು ಚಿತ್ರ ಒಂದರಲ್ಲಿ ಆರ್ಯನ್ ಜೊತೆ ನಟಿಸುತ್ತಿರುವ ತಮನ್ನಾ ಆರ್ಯನ್  ಚಿತ್ರವನ್ನು ಸಹಿತ ಮಕಾಡೆ ಮಲಗಿಸುತ್ತಾಳ ಅಥವಾ ಗೆಲ್ಲಿಸುತ್ತಾಳ? ಸದ್ಯಕ್ಕೆ ಉತ್ತರ ಯಾರಿಗೂ ಗೊತ್ತಿಲ್ಲ!  

Share this Story:

Follow Webdunia kannada