Select Your Language

Notifications

webdunia
webdunia
webdunia
webdunia

ತಮನ್ನಳಿಗೆ ಕಾಲಿವುಡ್ ನಿಂದ ಬೆದರಿಕೆ ಕರೆ ?

ತಮನ್ನಳಿಗೆ ಕಾಲಿವುಡ್ ನಿಂದ ಬೆದರಿಕೆ ಕರೆ ?
ಬೆಂಗಳೂರು , ಮಂಗಳವಾರ, 6 ಮೇ 2014 (09:36 IST)
ತಮನ್ನಳಿಗೆ ಕಳೆದ ವರ್ಷ ಅಂದರೆ 2013  ರಲ್ಲಿ ಕೈಲಿ ಚಾನ್ಸ್ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿತ್ತು. ಆಕೆಯ ಕಾಲ ಹಾಗೆ ಉಳಿಯಲಿಲ್ಲ, ಬದಲಿಗೆ 2014  ರಲ್ಲಿ ಕೈ ತುಂಬಾ ಕೆಲಸ ಇದ್ದು ತಮನ್ನ ಅಂದ್ರೆ ಸುಮ್ಮನೇನಾ ಅನ್ನುವ ವಾತಾವರಣ ಕಲ್ಪಿತ ಆಗಿದೆ. ಪ್ರಸ್ತುತ ತಮ್ಮು ಕೈಲಿ ಎರಡು ಕಾಲಿವುಡ್ ಚಿತ್ರಗಳು, ಎರಡು ಟಾಲಿವುಡ್ ಮತ್ತು ಒಂದೆರದಕ್ಕೆ ಬಾಲಿವುದು ನಲ್ಲೂ ನಟಿಸುವ ಅವಕಾಶಗಳು ಸಿಕ್ಕಿವೆ. ಒಟ್ಟಾರೆ ತುಂಬಾ ಬ್ಯುಸಿ ಆಕೆ. 
 
ಆದರೆ ಆಕೆ ಪಾಡಿಗೆ ಇರಲು ಬಿಡ್ತಾರ ಜನ, ತನ್ನ ಚಿತ್ರದಲ್ಲಿ ಐಟಂ ಮಾಡಬೇಕು ಇಲ್ಲದೆ ಇದ್ರೆ ಸರಿ ಆಗಲ್ಲ ಎನ್ನುವ ವಾರ್ನ್ ಮಾಡಿದ್ದಾರಂತೆ ಕಾಲಿವುಡ್ ಮ್ಯಾನೇಜರ್ ಒಬ್ಬರು. ಅವರಿಂದ ಈ ರೀತಿಯ ಬೆದರಿಕೆ ಕರೆ ಬಂದಿದೆಯಂತೆ ಪಾಪದ ತಮನ್ನಾಗೆ ! ಕಾಲಿವುಡ್ನಲ್ಲಿ ತಮನ್ನ ಉದಯನಿಧಿ ಸ್ಟಾಲಿನ್   ಮೂವಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.  
 
ಆದರೆ ಈ ಪಾತ್ರ ಮಾಡುವ ಮುನ್ನ ಓರ್ವ ಮ್ಯಾನೇಜರ್ ತನಗೆ ಫೋನ್ ಮಾಡಿ ಕಾಲಿವುಡ್ ಸ್ಟಾರ್ ಹೀರೋ ಸಿನಿಮಾ ಒಂದಕ್ಕೆ ಐಟಂ ನಂಬರ್ ಮಾಡ ಬೇಕು , ಹಾಗೆ ಮಾಡದೆ ಹೋದಲ್ಲಿ ನಿನಗೆ  ಕಾಲಿವುಡ್ ನಲ್ಲಿ ಯಾವುದೇ ಭವಿಷ್ಯ ಇಲ್ಲದಂತೆ ಮಾಡ್ತೀನಿ ಎನ್ನುವ ಬೆದರಿಕೆ ಒಡ್ಡಿದ್ದಾನೆ ಆತ. ಆ ಚಿತ್ರದ ವಿವರ ತಿಳಿದುಕೊಂಡ ತಮನ್ನ ಉದಯ್ ನಿಧಿ ಸ್ಟಾಲಿನ್ ಹೀರೋ. 
 
ಉದಯ್  ಈಕೆಗೆ ಚೆನ್ನಾಗಿ ಪರಿಚಯ ಇರೋ ವ್ಯಕ್ತಿ. ತನ್ನನ್ನು ಬೆದರಿಸಿದ ಮ್ಯಾನೇಜರ್ ನಿಮ್ಮ ಪರಿಚಿತನ ಎಂದು ಆಕೆ ಉದಯ್ ಬಾಲಿ ಕೆಲಿದಾಗಾಟ ಯಾರೋ ಗೊತ್ತಿಲ್ಲ ಎಂದು ಗೋಣು ಆಡಿಸಿ, ಅಂತಹ ಹೆಸರಿನವರು ಯಾರೂ ತನಗೆ ಗೊತ್ತಿಲ್ಲ ಎಂಬುದಾಗಿ ಹೇಳಿದನಂತೆ.  ಯಾರಿರ ಬಹುದು ಆತ ಎನ್ನುವ ಚಿಂತೇಲಿ ಇದ್ದಾಳಂತೆ ತಮ್ಮು ! 

Share this Story:

Follow Webdunia kannada