Select Your Language

Notifications

webdunia
webdunia
webdunia
webdunia

ವಿವಾದದ ಸುಳಿಯಲ್ಲಿ ಸ್ವಪ್ನೋಂಕಿ ರಾಣಿ

ವಿವಾದದ ಸುಳಿಯಲ್ಲಿ ಸ್ವಪ್ನೋಂಕಿ ರಾಣಿ
, ಮಂಗಳವಾರ, 4 ಆಗಸ್ಟ್ 2015 (10:37 IST)
ಶುಕ್ರವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆಗೊಂಡಿರೋ ಸೃಜನ್ ಲೋಕೇಶ್ ಹಾಗೂ ಐಶ್ವರ್ಯಾ ಸಿಂಧೋಗಿ ಅಭಿನಯದ ಸಂಪ್ನೋಕಿ ರಾಣಿ ಚಿತ್ರವೀಗ ವಿವಾದದಲ್ಲಿ ಸಿಲುಕಿದೆ. ವರನಟ ಡಾ ರಾಜ್ ಕುಮಾರ್ ಅಭಿನಯದ ಐತಿಹಾಸಿಕ ಚಿತ್ರ ಮಯೂರದ ದೃಶ್ಯಾವಳಿಗಳನ್ನ ಸಂಪ್ನೋಕಿ ರಾಣಿಯಲ್ಲಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಇದರ ವಿರುದ್ಧವೀಗ ಮಯೂರ ಚಿತ್ರದ ನಿರ್ಮಾಪಕ ಮತ್ತು ವಿತರಕ ಹೆಚ್ ಎಂ ಶಿವಲಿಂಗಯ್ಯ  ಸಂಪ್ನೋಕಿ ರಾಣಿ ಚಿತ್ರದ ನಿರ್ಮಾಪಕರ ವಿರುದ್ಧ ಫಿಲ್ಮ್ ಛೇಂಬರ್ ಗೆ ದೂರು ನೀಡಿದ್ದಾರೆ.
ಮಯೂರ ಚಿತ್ರದ ಸಂಪೂರ್ಣ ಹಕ್ಕು ತಮ್ಮ ಬಳಿ ಇದ್ದು, ತಮ್ಮ ಅನುಮತಿ ಇಲ್ಲದೆ ಚಿತ್ರದ ದೃಶ್ಯಾವಳಿಗಳನ್ನು ಬಳಸಿಕೊಂಡಿದ್ದಕ್ಕೆ ನಿರ್ಮಾಪಕರು ಗರಂ ಆಗಿದ್ದಾರೆ. ಈ ಕೂಡಲೇ ಚಿತ್ರದಿಂದ ಮಯೂರ ಚಿತ್ರದ ದೃಶ್ಯಗಳನ್ನು ತೆಗೆಯಬೇಕು ಇಲ್ಲದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಶಿವಲಿಂಗಯ್ಯ ಎಚ್ಚರಿಸಿದ್ದಾರೆ.  
 
ವಿತರಕ, ನಿರ್ಮಾಪಕ ಶಿವಲಿಂಗಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿರೋ ‘ಸಪ್ನೊಂಕಿ ರಾಣಿ’ ಚಿತ್ರ ನಿರ್ಮಾಪಕ ಪೃಥ್ವಿ ದೃಶ್ಯ ಬಳಸಿಕೊಂಡಿರೋದಕ್ಕೆ ಡಾ ರಾಜ್ ಕುಮಾರ್ ಕುಟುಂಬದಿಂದಲೇ ಆಕ್ಷೇಪಣೆ ಇಲ್ಲ. ಇನ್ನು ಇದನ್ನ ಪ್ರಶ್ನಿಸಲು ಶಿವಲಿಂಗಯ್ಯಗೇನು ನೈತಿಕತೆ ಇದೆ ಅಂತಾ ತಿರುಗೇಟು ನೀಡಿದ್ದಾರೆ. ಡಾ ರಾಜ್ ಕುಮಾರ್ ಮೇಲಿನ ಅಭಿಮಾನಕ್ಕೆ ದೃಶ್ಯಗಳನ್ನ ಬಳಸಿಕೊಂಡಿದ್ದೇವೆ. ಇನ್ನು ಈ ಚಿತ್ರದ ಮುಹೂರ್ತಕ್ಕೆ ಕ್ಲಾಪ್ ಮಾಡಿದ್ದು ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಂತಲೂ ಪೃಥ್ವಿ ಸ್ಪಷ್ಟಪಡಿಸಿದ್ದಾರೆ. 
 

Share this Story:

Follow Webdunia kannada