Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರದಲ್ಲಿ ರಜನಿ ಕಾಂತ್ ನಟನೆ ?

ಕನ್ನಡ ಚಿತ್ರದಲ್ಲಿ ರಜನಿ ಕಾಂತ್ ನಟನೆ ?
, ಶುಕ್ರವಾರ, 17 ಅಕ್ಟೋಬರ್ 2014 (12:03 IST)
ಕನ್ನಡ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್  ಮತ್ತೆ ನಟಿಸುತ್ತಾರಾ ಎನ್ನುವ ಪ್ರಶ್ನೆ ಸಾಕಷ್ಟು ಸಂಚಲನ ಉಂಟು ಮಾಡುವಂತಹದ್ದು  ನಿಜ. ಆದರೆ ಅವರು ಕನ್ನಡ ಚಿತ್ರದಲ್ಲಿ ಅಲ್ಲ ಬದಲಿಗೆ ಕನ್ನಡ ಚಿತ್ರದ ರೀಮೇಕ್ ನಲ್ಲಿ ನಟಿಸಲು ಓಕೆ ಅಂದಿದ್ದಾರಂತೆ. 
 
ಪ್ರಸ್ತುತ ಲಿಂಗಾ ಚಿತ್ರದ ಅಭಿನಯದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಜನಿಕಾಂತ್ ಕನ್ನಡದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ಬಂಗಾರದ ಮನುಷ್ಯ ಚಿತ್ರದ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿದೆ.
 
ಡಾ. ರಾಜ್ ಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್  ಅಭಿನಯಿಸಿದ್ದ ಈ ಚಿತ್ರ ಅತ್ಯಂತ ಜನಪ್ರಿಯತೆ ಹೊಂದಿತ್ತು. ಈ ರೀಮೇಕ್ ಚಿತ್ರವನ್ನು ಕೆ ಎಸ್ ರವಿಕುಮಾರ್ ಅವರು ನಿರ್ದೇಶಿಸುತ್ತಿದ್ದಾರೆ. ಇದನ್ನು ಲಿಂಗಾ ಚಿತ್ರಕ್ಕೆ ಮುನ್ನ ಚಿತ್ರೀಕರಣ ಮಾಡಬೇಕು ಎಂದು ಬಯಸಿದ್ದರಂತೆ ರಜನಿ ಆದರೆ ಕಾರಣಾಂತರಗಳಿಂದ ಆ ಪ್ರಾಜಕ್ಟ್ ಹಿಂದುಳಿದು ಲಿಂಗಾ  ಮೊದಲು ಕೆಲಸ ಆರಂಭ ಮಾಡಿತ್ತು. 
 
ತಾನು ಕಂಡಕ್ಟರ್ ವೃತ್ತಿಯಲ್ಲಿ ಇದ್ದಾಗ ಈ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಆನಂದಿಸಿದ್ದ ರಜನಿಕಾಂತ್ ಈಗ ಡಾ. ರಾಜ್ ಕುಮಾರ್ ನಟಿಸಿದ್ದ ಅಂತಹ ಅಪರೂಪದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಗ ಡಾ. ರಾಜ್ ಈಗ ರಜನಿಕಾಂತ್ ಅವರನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ. 
 

Share this Story:

Follow Webdunia kannada