Webdunia - Bharat's app for daily news and videos

Install App

ಸಿನಿಮಾದಲ್ಲಿ ಮೂಡಿ ಬರಲಿದೆ ಸನ್ನಿ ರಿಯಲ್ ಸ್ಟೋರಿ...?!

Webdunia
ಬುಧವಾರ, 4 ಮಾರ್ಚ್ 2015 (09:51 IST)
ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಎಲ್ಲರಿಗೂ ಸ್ಟಾರ್ ನಟಿ. ಆಕೆ ಕಾಲಿಟ್ಟ ಕಡೆ ನಿರ್ಮಾಪಕರಿಗೆ ದುಡ್ದೋ ದುಡ್ಡು! ಈಕೆ ಸ್ಟಾರ್ ಕಲಾವಿದರಿಗೆ ಸೆಡ್ಡು ಹೊಡೆಯುವಂತಹ ನಟಿ. ಬಾಲಿವುಡ್‌ಗೆ ಬರುವ ಮುನ್ನ ವಯಸ್ಕರಿಗೆ ಕಾಮದ ಪಾಠ ಹೇಳಿಕೊಡುವ ಚಿತ್ರಗಳಲ್ಲಿ ನಟಿಸುತ್ತಿದ್ದಳು ಈ ಸನ್ನಿ. ಬಾಲಿವುಡ್ ಇಂಡಸ್ಟ್ರಿಗೆ ಬರುವ ಮುನ್ನ  ಸನ್ನಿ ಲಿಯೋನ್‌ಳನ್ನು ನೋಡ ಬೇಕೆಂದರೆ ಎ ಸರ್ಟಿಫಿಕೆಟ್ ಅತ್ಯಗತ್ಯವಾಗಿ ಇರಲೇ ಬೇಕಿತ್ತು!
ಆದರೆ ಈಗ ಆಕೆ ಬದಲಾಗಿದ್ದಾಳೆ. ಇತ್ತೀಚಿಗೆ ಆಕೆ ಬಗ್ಗೆ ಕೆಲವು ಸಂಚಲನ ಸಂಗತಿಗಳು ಹೊರ ಬಂದಿವೆ. ಆಕೆ ಹರೆಯದಲ್ಲಿ ಇದ್ದಾಗಲೇ ಲೈಂಗಿಕ ಅನುಭವಕ್ಕೆ ಒಳಗಾಗಿದ್ದಳು. ಆದರೆ ಯಾವ ಕಾರಣದಿಂದ ಆಕೆ ಪೋರ್ನ್ ಸ್ಟಾರ್ ಆಗಿದ್ದು, ಬಾಲಿವುಡ್‌ಗೆ ಹೇಗೆ ಕಾಲಿಟ್ಟಳು ಎನ್ನುವ ಸಂಗತಿಯನ್ನು ಸಹಿತ ತಿಳಿಸುವ ಒಂದು ಚಿತ್ರದಲ್ಲಿ ನಟಿಸಲು ಸನ್ನಿ ಸಿದ್ಧ ಆಗಿದ್ದಾಳೆ. ಅದು ಸನ್ನಿ ನಿಜ ಬದುಕಿನ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಭಾರತೀಯ ಮೂಲದ ಈ ತಾರೆಯ ಬದುಕನ್ನು ದಿಲೀಪ್ ಮೆಹ್ತಾ ಎನ್ನುವ ನಿರ್ದೇಶಕ ತೆರೆಯ ಮೇಲೆ ತರಲು ಸಿದ್ಧತೆ ನಡಿಸಿದ್ದಾರೆ. ಆಕೆ ಜಿಸ್ಮ್ 2ರ  ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದಳು. ಸನ್ನಿಲಿಯೋನ್ ತಂದೆ ಟಿಬೆಟ್ ನಲ್ಲಿ ಜನ್ಮಿಸಿದ ಸಿಖ್. ಆ ಬಳಿಕ ದೆಹಲಿಯಲ್ಲಿ ಬೆಳೆದರು. ಈಕೆಯ ತಾಯಿ ಹಿಮಾಚಲ್ ಪ್ರದೇಶಕ್ಕೆ ಸೇರಿದವರು. 1981ರ ಮೇ13 ರಂದು  ಹುಟ್ಟಿದ ಈಕೆ ಮೂಲ ಹೆಸರು ಕೆರೆನ್. ಈಕೆ ಹುಟ್ಟುವುದಕ್ಕಿಂತ ಮೊದಲೇ ತಾಯಿತಂದೆ ಕೆನಡಾದಲ್ಲಿ ನೆಲೆಸಿದ್ದರು. ಚಿಕ್ಕ ವಯಸ್ಸಿನಲ್ಲಿ ಆಕೆ ಹಾಡು ಹಾಡುವ, ಡ್ಯಾನ್ಸ್ ಮಾಡುವ, ಕುದುರೆ ಸವಾರಿ, ನಾಯಿ ಮರಿಗಳನ್ನು ಇಷ್ಟ ಪಡುವ ಸಂಗತಿಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಳು. ಚಿಕ್ಕಂದಿನಿಂದ ಆಕೆ ಸ್ವತಂತ್ರವಾಗಿ ಇದ್ದಳು.   
 
ತನ್ನ ಹನ್ನೆರಡನೆ ವಯಸ್ಸಿನಲ್ಲಿ ಆಕೆ ಬಾಯ್ ಫ್ರೆಂಡ್ ಜೊತೆ ಮೊದಲ ಮುತ್ತಿನ ರುಚಿ ಕಂಡಿದ್ದಳು. ಹರೆಯಕ್ಕೆ ಬರುವಷ್ಟರಲ್ಲಿ ಮಾಡೆಲ್ ಲೋಕದಲ್ಲಿ ತನಗೊಂದು ಸ್ಥಾನ ಹೊಂದಿದ್ದಳು. 1999ರಲ್ಲಿ ಪದವಿ ಪಡೆದ ಆಕೆ ನಂತರ ಪೀಡಿಯಾಟ್ರಿಕ್ ನರ್ಸ್ ಶಿಕ್ಷಣ ಪಡೆದಿದ್ದಳು. ಈ ಘಟ್ಟದಲ್ಲಿ ಬೆತ್ತಲೆ ನರ್ತನ ಮಾಡುವ ಮತ್ತೋರ್ವ ಯುವತಿಯ ಪರಿಚಯ ಮಾಡಿಕೊಂಡಳು. ಅವಳ ಮೂಲಕ ಜಾನ್ ಸ್ಟಿವನ್ ಎನ್ನುವ ಏಜೆಂಟ್ ಪರಿಚಯ ಆಯ್ತು. ಮತ್ತೊಂದು ಸಂಗತಿ ಅಡಲ್ಟ್ ಚಿತ್ರದಲ್ಲಿ ನಟಿಸುವ ಮುನ್ನ ಆಕೆ ಜರ್ಮನ್ ಬೇಕರಿಯಲ್ಲಿ ಸಹ ಕೆಲಸ ಮಾಡಿದ್ದಳು. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?