Select Your Language

Notifications

webdunia
webdunia
webdunia
webdunia

ಪೋರ್ನ್ ನಟಿ ಸನ್ನಿ ಲಿಯೋನ್ ಕಂಡ್ರೆ ದೂರ ಓಡುತ್ತಿರುವ ಬಾಲಿವುಡ್ ಹೀರೋಗಳು!

ಪೋರ್ನ್ ನಟಿ ಸನ್ನಿ ಲಿಯೋನ್  ಕಂಡ್ರೆ ದೂರ ಓಡುತ್ತಿರುವ ಬಾಲಿವುಡ್ ಹೀರೋಗಳು!
mumbai , ಶನಿವಾರ, 29 ನವೆಂಬರ್ 2014 (12:45 IST)
ಬಿ ಟೌನ್ ನಲ್ಲಿ ಗ್ಲಾಮರ್ ಅನ್ನೋದು ಸಾಮಾನ್ಯ ಸಂಗತಿ. ಹೊಸ ಹೀರೋಯಿನ್ ಬಂದೊಡನೆ ಆಕೆ ಬಟ್ಟೆಯನ್ನು ಎಷ್ಟು ಬಿಚ್ಚಿಸಬೇಕೋ ಅಷ್ಟನ್ನು ಬಿಚ್ಚಿಸಿ ಜಗತ್ತಿನ ಮುಂದೆ ಇಡುವ ಸಂಪ್ರದಾಯ ಅನೂಚಾನವಾಗಿ ನಡೆದು ಬಂದಿದೆ. ಆದರೆ ಒಬ್ಬ ಹೀರೋಯಿನ್ ಕಂಡರೆ ಬಾಲಿವುಡ್ ನ ಹಿರಿಯ ಕಿರಿಯ ಪುಟ್ಟ ಹಾಗೂ ನಿರ್ಮಾಪಕ-ನಿರ್ದೇಶಕರು ಬೆಚ್ಚಿ ಬೀಳುತ್ತಿದ್ದಾರೆ. 
 
ಆ ರೀತಿ ಬಾಲಿವುಡ್ ಜನರನ್ನು ಈ ಕೆನಡಿಯನ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್  ಯಾವ ಕಾರಣದಿಂದ ಬೆಚ್ಚುವಂತೆ ಮಾಡುತ್ತಿದ್ದಾಳೆ ಎನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಕಾಡುತ್ತಿರ ಬಹುದು. ಆಕೆ ತಾನು ಬಟ್ಟೆ ಹಾಕಿಕೊಳ್ಳುವುದಕ್ಕೆ ಆದ್ಯತೆ ಕೊಡದೆ ಎಷ್ಟು ನಿಮ್ಮ ಕೈಲಿ ಎಕ್ಸ್ ಪೋಸ್ ಮಾಡಿಸಲು ಸಾಧ್ಯವೋ ಅಷ್ಟನ್ನು ಮಾಡಿ ಎಂದು ಸವಾಲಿಗೆ ನಿಂತು ಬಿಡುತ್ತಿದ್ದಾಳೆ. ಈ ಸಂಗತಿ ಅನೇಕ ಹೀರೋಗಳಿಗೆ ಇಷ್ಟ ಆಗಿಲ್ಲ. ಅವರು ಆಕೆಯನ್ನು ತಮ್ಮ ಚಿತ್ರಗಳಿಗೆ ಬೇಡ ಎಂದು ಹೇಳಿ ದೂರ ತಳ್ಳಿದ್ದಾರೆ. 
 
ಇದರ ನಡುವೆ ದಕ್ಷಿಣ ಭಾರತದಲ್ಲಿ ಕನ್ನಡ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷಿಗರು ಸನ್ನಿಗೆ ಸಾಕಷ್ಟು ಅವಕಾಶ ನೀಡುತ್ತಿದ್ದಾರೆ.ಇಲ್ಲಿನ ಯಂಗ್ ಹೀರೋಗಳು ಆಕೆಯ ಜೊತೆ ನಟಿಸಲು ಆಸಕ್ತಿ ತೋರುತ್ತಿದ್ದರೆ, ಬಿ ಟೌನ್ ಅನೇಕ ಹೀರೋಗಳು ಆಕೆಯ ಜೊತೆ ನಟಿಸಲು ಆಸಕ್ತಿ ತೋರುತ್ತಿಲ್ಲ.ಮುಖ್ಯವಾಗಿ ಆಕೆ ತನ್ನ ಅಂದದಿಂದ  ತೋರುವ ಪ್ರಭಾವದ ಬಗ್ಗೆಯೂ ಸಹಿತ ಸಾಕಷ್ಟು ಚಿಂತೆ ಮಾಡುವಂತಾಗಿದೆ ಇವರಿಗೆ. 
 
ಇಮ್ರಾನ್ ಹಶ್ಮಿ ಆಕೆಯೊಂದಿಗೆ ನಟಿಸುವುದಕ್ಕೆ ಇಷ್ಟ ಪಟ್ಟಿಲ್ಲ. ಬಂದ ಅವಕಾಶವನ್ನು ನೇರವಾಗಿ ತಿರಸ್ಕರಿಸಿದ್ದಾರೆ. ಕೆಲವು ಹೀರೋಗಳು ಆಕೆಯ ಜೊತೆ ತಮಗೆ ಪರಿಚಯ ಇದೆ ಎನ್ನುವುದನ್ನು ಹೇಳಲು ಸಹಿತ ಇಷ್ಟ ಪಡುತ್ತಿಲ್ಲ. ಅದೇ ರೀತಿ ಅನೇಕರು ಸಹಿತ ಹಾಗೆ ಮಾಡಿರುವುದರಿಂದ ಸನ್ನಿ ಸದ್ಯಕ್ಕೆ ದಕ್ಷಿಣ ಭಾರತದ ಚಿತ್ರರಂಗವನ್ನೇ  ಅವಲಂಬಿಸ ಬೇಕಾಗಿದೆ. 
 

Share this Story:

Follow Webdunia kannada