Select Your Language

Notifications

webdunia
webdunia
webdunia
webdunia

ರಜನಿ ಮುಂದಿನ ಚಿತ್ರದ ಹೊಣೆ ಹೊರಲಿರುವ ಸುಂದರ್ ?!

ರಜನಿ ಮುಂದಿನ ಚಿತ್ರದ ಹೊಣೆ ಹೊರಲಿರುವ ಸುಂದರ್ ?!
, ಶುಕ್ರವಾರ, 10 ಏಪ್ರಿಲ್ 2015 (09:42 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರಗಳು ಈಗ ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ. ಆದಕಾರಣ ಅವರು ಚಿತ್ರದ ಯಶಸ್ಸಿಗಾಗಿ ಕಾಯುವಂತಾಗಿದೆ. ರಜನಿ ಅವರ ಚಿತ್ರಗಳನ್ನು ನಿರ್ದೇಶಿಸಲು ಸುಂದರ್.ಸಿ ಸಿದ್ಧವಾಗಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ರಜನಿ ಅವರು ಇತ್ತೀಚೆಗೆ ನಟಿಸಿದ ಚಿತ್ರ ಲಿಂಗಾ. ಅದರ ಫಲಿತಾಂಶ ಹೇಗೆ ಇರಲಿ ಆದರೆ ಆ ಚಿತ್ರ ರಜನಿ ಅವರಿಗೆ ಬಿಡಿಸಲಾಗದ ಸಿಕ್ಕಿನಂತೆ ಕಾಡಿದ್ದು ಮಾತ್ರ ಯಾರು ಮರೆಯಲಾಗದು. 
ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಂದಿನ ಚಿತ್ರದ ಬಗ್ಗೆ ಏನು ಹೇಳಬಹುದೆನ್ನುವ ಕುತೂಹಲ ಜನಕ್ಕಿದೆ. ವಿಶೇಷ ಅಂದ್ರೆ ರಜನಿ ಅವರ ಮುಂದಿನ ಚಿತ್ರದ ಬಗ್ಗೆ ಅನೇಕ ಸಂಗತಿಗಳು ಹರಡಿವೆ. ಶಂಕರ್ ನಿರ್ದೇಶನದ ಎಂದಿರನ್-2 ಗಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನುವ ಸುದ್ದಿಯ ಸದ್ದು ಜೋರಾಗಿದ್ದರೂ ಸಹಿತ ರಜನಿಕಾಂತ್ ಮತ್ತು ಶಂಕರ್ ಅವರಿಂದ ಯಾವುದೇ ರೀತಿಯ ಸುದ್ದಿ ಇಲ್ಲ. ಅದೇ ರೀತಿ ಎ.ಆರ್.ಮುರುಗದಾಸ್ ಸಹ ಇದೆ ಪಟ್ಟಿಯಲ್ಲಿದ್ದಾರೆ. ಈ ಸಮಯದಲ್ಲಿ ಸುಂದರ್ ಅವರು ರಜನಿಕಾಂತ್ ಅವರ ಚಿತ್ರ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹೊರ ಬಂದಿದೆ.  
 
ಕಾಲಿವುಡ್ ನಲ್ಲಿ ಇವರಿಬ್ಬರ ಕಾಂಬಿನೇಶನ್‌ನಲ್ಲಿ 1997ರಲ್ಲಿ ಅರುಣಾಚಲಂ ಸಿದ್ಧವಾಗಿತ್ತು. ಸುಮಾರು 18 ವರ್ಷಗಳ ಬಳಿಕ ಮತ್ತೇ ಈ ಸೂಪರ್ ಹಿಟ್ ಕಾಂಬಿನೇಶನ್ ಒಂದಾಗಿ ಸೂಪರ್ ಹಿಟ್ ಚಿತ್ರ ನೀಡಲು ಸಿದ್ಧವಾಗಿರುವುದು ರಜನಿ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯ ಸಂಗತಿ ಆಗಿದೆ. 
 
ರಜನಿ ಅವರು ಈಗ ಸೀರಿಯಸ್ ಆಗಿರುವಂತಹ ಆಕ್ಷನ್ ಚಿತ್ರದಲ್ಲಿ ನಟಿಸಿದ್ದರು, ಆದರೆ ಈಗ ಅವರು ಹಾಸ್ಯಭರಿತ ಮನೋರಂಜನಾತ್ಮಕ ಚಿತ್ರದಲ್ಲಿ ನಟಿಸಲು ಆದ್ಯತೆ ನೀಡಿದ್ದಾರೆ ಎನ್ನುವ ಸುದ್ದಿ ಇದೆ. ಆ ರೀತಿಯ ಚಿತ್ರವನ್ನು ನಿರ್ದೇಶಿಸಲು ಸುಂದರ್ ಅವರು ಸಿದ್ಧವಾಗಿದ್ದಾರೆ. ಆದ್ದರಿಂದ ತನ್ನ ಮುಂದಿನ ಚಿತ್ರದ ನಿರ್ದೇಶನದ ಹೊಣೆಯನ್ನು ರಜನಿ ಅವರು ಸುಂದರ್ ಅವರಿಗೆ ಹೊರಿಸಿದ್ದರ ಬಗ್ಗೆ ಸುದ್ದಿ ಇದೆ. ಆದರೆ ಅದು ಅಧಿಕೃತವಾಗಿ ಹೊರ ಬಂದಿಲ್ಲ. ಎಲ್ಲವೂ ಈಗ ಹರಡಿರುವ ಸುದ್ದಿಯಂತೆ ಆದರೆ ರಜನಿ ಅಭಿಮಾನಿಗಳಿಗೆ ಭರಪೂರ ಖುಷಿ! 

Share this Story:

Follow Webdunia kannada