ಪುತ್ರ ಅಭಿಷೇಕ್ ನೋಡಿ ಭಾವುಕರಾದ ಸುಮಲತಾ! ಕಾರಣವೇನು ಗೊತ್ತಾ?

Webdunia
ಶನಿವಾರ, 19 ಜನವರಿ 2019 (09:33 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಮೇಲೆ ಎಷ್ಟು ಪ್ರೀತಿಯಿದೆಯೋ ಅಷ್ಟೇ ಪ್ರೀತಿ ಅವರ ಪುತ್ರ, ಪತ್ನಿಯ ಮೇಲೆಯೂ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಇದನ್ನು ನೋಡಿ ಸುಮಲತಾ ಅವರು ಮೂಕ ವಿಸ್ಮಿತರಾಗಿದ್ದಾರೆ.


ಅಂಬರೀಶ್ ಹೊರಗಡೆ ಎಲ್ಲಾದರೂ ಕಾಣಿಸಿಕೊಂಡರೆ ಜನ ಅವರನ್ನು ಒಮ್ಮೆ ನೋಡಲು ಮುಗಿ ಬೀಳುತ್ತಿದ್ದರು. ಇದೀಗ ಪುತ್ರ ಅಭಿಷೇಕ್ ಮೇಲೆಯೂ ಜನ ಅಷ್ಟೇ ಪ್ರೀತಿ ವ್ಯಕ್ತಪಡಿಸಿದ್ದು ನೋಡಿ ಸುಮಲತಾ ಭಾವುಕರಾಗಿದ್ದಾರೆ.

ಮೆಜೆಸ್ಟಿಕ್ ನಲ್ಲಿ ರೆಸ್ಟೋರೆಂಟ್ ಒಂದರ ಉದ್ಘಾಟನೆಗೆ ಬಂದಿದ್ದ ಅಭಿಷೇಕ್ ಗೆ ಅಲ್ಲಿ ಅಭಿಮಾನಿಗಳು ಪ್ರೀತಿಯಿಂದಲೇ ಮುಗಿಬಿದಿದ್ದಾರೆ. ಒಂದು ಸೆಲ್ಫೀ ತೆಗೆದುಕೊಳ್ಳಲು ನೂಕುನುಗ್ಗಲು ಮಾಡಿದ್ದಾರೆ. ಜನರ ಈ ಪ್ರೀತಿ ಕಂಡು ಸುಮಲತಾ ಧನ್ಯವಾದ ಸಲ್ಲಿಸಿದ್ದು, ಈ ಜನರ ಪ್ರೀತಿಯೇ ಅಂಬರೀಶ್ ಗೆ ಶಕ್ತಿಯಾಗಿತ್ತು ಎಂದಿದ್ದಾರೆ. ಈಗ ಮಗನ ಮೇಲೂ ಅಷ್ಟೇ ಪ್ರೀತಿ ವ್ಯಕ್ತಪಡಿಸುತ್ತಿರುವುದಕ್ಕೆ ಧನ್ಯವಾದ ಎಂದಿದ್ದಾರೆ. ಅಂದ ಹಾಗೆ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಇನ್ನೂ ತೆರೆ ಕಂಡಿಲ್ಲ. ಆಗಲೇ ಆತನ ಮೇಲೆ ಜನರ ಕ್ರೇಜ್ ನೋಡಿ ಯಾವ ತಾಯಿಗಾದರೂ ಖುಷಿಯಾಗದೇ ಇದ್ದೀತೇ?

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments