Select Your Language

Notifications

webdunia
webdunia
webdunia
webdunia

2016ರ ಈದ್ ವೇಳೆಗೆ ಬಿಡುಗಡೆಯಾಗಲು ಸಿದ್ಧವಾಗಲಿದೆ 'ಸುಲ್ತಾನ್'

2016ರ ಈದ್ ವೇಳೆಗೆ ಬಿಡುಗಡೆಯಾಗಲು ಸಿದ್ಧವಾಗಲಿದೆ 'ಸುಲ್ತಾನ್'
, ಗುರುವಾರ, 25 ಜೂನ್ 2015 (10:07 IST)
ಸುಲ್ತಾನ್ ಚಿತ್ರದ ಬಗ್ಗೆ ದಿನಕ್ಕೊಂದು ಸಂಗತಿ ಹೊರ ಬರುತ್ತಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ಎನ್ನುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ನಾಯಕಿಯಾಗಿ ದೀಪಿಕಾ, ಆಮೇಲೆ ಕಂಗನ ಅದಾದ ಬಳಿಕ ಈಗ ಪರಿಣಿತಿ ಆಯ್ಕೆ ಆಗಿದ್ದಾರೆ.
ಪ್ರಸ್ತುತ ಹೇಳಿಕೊಳ್ಳುವಂತಹ ಅವಕಾಶಗಳು ಇಲ್ಲದ ಕಾರಣ  ಪರಿಣಿತಿ ಸಮ್ಮತಿ ನೀಡಿದ್ದಾರೆ ಎನ್ನುವ ಕುಹಕ ಇದ್ದರೂ ಸಲ್ಲೂ ಮಿಯ ಜೊತೆ ನಟಿಸಿದರೆ ನಟಿಯರ ಬದುಕು ಉಜ್ವಲ ಆಗುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ಸಹಿತ  ಸತ್ಯವಾದ ಸಂಗತಿ. ಈ ಚಿತ್ರವನ್ನು ಯಶ್ ರಾಜ್ ಫಿಲಿಮ್ಸ್ ಅಡಿಯಲ್ಲಿ ಆದಿತ್ಯ ಚೋಪ್ರ ಅವರು  ನಿರ್ಮಾಣ ಮಾಡುತ್ತಿದ್ದಾರೆ. ಇದನ್ನು ಅಲಿ ಅಬ್ಬಾಸ್  ಜಫರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಈದ್ ಸಮಯದಲ್ಲಿ ಬಿಡುಗಡೆ ಆಗುತ್ತದೆ ಎನ್ನುವ ಸುದ್ದಿ ಹೊರ ಬಂದಿದೆ.
 
ಯಶ್ ರಾಜ್ ಫಿಲಿಮ್ಸ್ ನವರು ನಿರ್ಮಿಸಿದ್ದ ಏಕ್ ಥಾ ಟೈಗರ್ ಚಿತ್ರ ಬಾಕ್ಸಾಫೀಸಲ್ಲಿ ಭಾರಿ ಪ್ರಮಾಣದಲ್ಲಿ ಗಳಿಕೆ ಮಾಡಿತ್ತು. ಈಗ ಸುಲ್ತಾನ್  ಇದೇ ಟೀಮ್ ಅಡಿಯಲ್ಲಿ ಸಿದ್ಧವಾಗುತ್ತಿದ್ದು ಮುಂದಿನ ವರ್ಷ ತನ್ನ ಶಕ್ತಿ ತೋರುತ್ತಾನೆ. ಅದಕ್ಕೂ ಮುನ್ನ ಸಲ್ಲು ಮಿಯಾ ಅವರ ಅಭಿಮಾನಿಗಳು ಭಜರಂಗಿ ಭಾಯ್ಜಾನ್  ನೋಡಿ  ಎಂಜಾಯ್ ಮಾಡಿ. 

Share this Story:

Follow Webdunia kannada