Select Your Language

Notifications

webdunia
webdunia
webdunia
webdunia

ಜೂನ್‌ನಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿರುವ ಸುದೀಪ್ ಅಭಿನಯದ ರನ್ನ

ಜೂನ್‌ನಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿರುವ ಸುದೀಪ್ ಅಭಿನಯದ ರನ್ನ
, ಶುಕ್ರವಾರ, 22 ಮೇ 2015 (10:20 IST)
ಇತ್ತೀಚೆಗೆ ನಾವು ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ರನ್ನ ಸಧ್ಯದಲ್ಲೆ ಬಿಡುಗಡೆ ಆಗುವ ಸಾಧ್ಯತೆ ಇರುವ ಬಗ್ಗೆ ಹೇಳಿದ್ದೆವು. ಆದರೆ ಆ ಚಿತ್ರ ಇಂದು ಬಿಡುಗಡೆ ಆಗುತ್ತಿಲ್ಲ ಬದಲಿಗೆ ಆ ಚಿತ್ರ ಜೂನ್ 4ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಬಿಡುಗಡೆಯ ದಿನಾಂಕ ನಿಗದಿತವಾಗಿದೆ.ಸುದೀಪ್ ಮತ್ತು ನಿರ್ಮಾಪಕ ಚಂದ್ರಶೇಖರ್ ಅವರು ಉಳಿದ ಸದಸ್ಯರ ಜೊತೆಗೂಡಿ ಬಿಡುಗಡೆಯ ದಿನಾಂಕಕ್ಕೆ ಒಂದು ಅಂತಿಮ ರೂಪ ನೀಡಿದ್ದಾರೆ. 
ಇತ್ತೀಚೆಗೆ ಈ ಚಿತ್ರಕ್ಕೆ ಸೆನ್ಸಾರ್ ಆಯಿತು. ಚಿತ್ರಕ್ಕೆ ಯು / ಎ ಸರ್ಟಿಫಿಕೇಟ್ ದೊರೆತಿದ್ದು ಅದನ್ನು ಒಟ್ಟು 280 ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸುದೀಪ್ ಅವರ ಅಭಿನಯದ ಮಾಣಿಕ್ಯ ಕಳೆದ ವರ್ಷ ಮೇ 1ರಂದು  ಬಿಡುಗಡೆ ಆಗಿತ್ತು. ಅದಾದ ಬಳಿಕ ಕಿಚ್ಚ ರನ್ನ ,ಪುಲಿ (ತಮಿಳು), ಬಾಹುಬಲಿ (ತೆಲುಗು) ಚಿತ್ರಗಳಲ್ಲಿ ನಟಿಸಿದ್ದರೂ ಸಹಿತ ಯಾವುದೋ ಇನ್ನೂ ಬಿಡುಗಡೆಯಾಗಿಲ್ಲ. ರನ್ನ ಚಿತ್ರದಲ್ಲಿ ಸುದೀಪ್ ಜೊತೆ ಹರಿಪ್ರಿಯ, ರಚಿತ ರಾಮ್, ಮಧು, ಪ್ರಕಾಶ್ ರೈ ಮುಂತಾದವರು ನಟಿಸಿದ್ದಾರೆ. 

Share this Story:

Follow Webdunia kannada