Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬ ಆಚರಿಸಿಕೊಂಡ ನಟ ಸುದೀಪ್

ಹುಟ್ಟುಹಬ್ಬ ಆಚರಿಸಿಕೊಂಡ ನಟ ಸುದೀಪ್
, ಗುರುವಾರ, 3 ಸೆಪ್ಟಂಬರ್ 2015 (09:50 IST)
ಕಿಚ್ಚ ಸುದೀಪ್ ನಿನ್ನೆ ತಮ್ಮ 42ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಂಡ್ರು. ಮೊನ್ನೆ ರಾತ್ರಿಯೇ ಸುದೀಪ್ ನಿವಾಸಕ್ಕೆ ಹುಟ್ಟಹಬ್ಬದ ಶುಭಾಶಯವನ್ನು ಕೋರಲು ಆಗಮಿಸಿದ್ದರು. ಇವರೆಲ್ಲರ ಸಮ್ಮುಖದಲ್ಲೇ ಕಿಚ್ಚ ತಮ್ಮ ಹುಟ್ಟಹಬ್ಬವನ್ನು ಆಚರಿಸಿಕೊಂಡ್ರು. 
ಇನ್ನು ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದವರು 42ಕೆಜಿ ತೂಕದ ಕೇಕ್ ಕಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ರು. ಇನ್ನೊಂದು ಕಡೆ ಅಭಿಮಾನಿಗಳು ಹುಟ್ಟಹಬ್ಬಕ್ಕೆಂದು ವಿಶೇಷವಾದ ಆಗಿ ಟೀ-ಶರ್ಟ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ 'ಕಿಚ್ಚ' ಎಂದು ಬರೆಯಲಾಗಿದೆ. ಇದು ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊರಕುತ್ತಿದೆ.
 
ಸುದೀಪ್ ಅವರ ಹುಟ್ಟುಹಬ್ಬಕ್ಕೆ ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್,ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು, ನಟ-ನಟಿಯರು ಶುಭಾಶಯ ಕೋರಿದ್ದಾರೆ. ಇನ್ನು ಇವತ್ತಿನಿಂದ ಕೆಪಿಎಲ್ ಕ್ರಿಕೆಟ್ ಲೀಗ್ ಆರಂಭವಾಗುತ್ತಿರುವುದರಿಂದ ಎರಡು ದಿನಗಳ ಹಿಂದೆಯೇ ಕೋಟಿಗೊಬ್ಬ-2 ಸಿನಿಮಾದ ಸೆಟ್ ನಲ್ಲೇ ಸುದೀಪ್ ಹುಟ್ಟಹಬ್ಬವನ್ನು ಸಿನಿಮಾ ತಂಡ ಆಚರಿಸಿತ್ತು.

Share this Story:

Follow Webdunia kannada