Select Your Language

Notifications

webdunia
webdunia
webdunia
webdunia

ಅಭಿನಯ ಚಕ್ರವರ್ತಿಗೆ ಐತಿಹಾಸಿಕ ಸಿನಿಮಾ ಮಾಡೋ ಕನಸು

ಅಭಿನಯ ಚಕ್ರವರ್ತಿಗೆ ಐತಿಹಾಸಿಕ ಸಿನಿಮಾ ಮಾಡೋ ಕನಸು
, ಗುರುವಾರ, 27 ಆಗಸ್ಟ್ 2015 (10:02 IST)
ಅಭಿನಯ ಚಕ್ರವರ್ತಿ ಸುದೀಪ್ ವಿಭಿನ್ನ ಅಭಿನಯ ಮತ್ತು ನಿರ್ದೇಶನದಿಂದ ಜನಮನಗೆದ್ದಿದ್ದಾರೆ. ಕನ್ನಡವಲ್ಲದೆ ತಮಿಳು, ತೆಲುಗು ಹಿಂದಿಯಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ಸದಾ ಡಿಫರೆಂಟ್ ಸಿನಿಮಾದ ಬಗ್ಗೆ ಥಿಂಕ್ ಮಾಡೋ ಕಿಚ್ಚನ ಮನಸ್ಸಿನಲ್ಲೊಂದು ಹೊಸ ಆಲೋಚನೆ ಹುಟ್ಟಿಕೊಂಡಿದೆ. ಬಾಹುಬಲಿಯಂತೆ ಕನ್ನಡದಲ್ಲೂ ಬಿಗ್ ಬಜೆಟ್ ಮತ್ತು ಚಾರಿತ್ರಿಕ ಸಿನಿಮಾ ಮಾಡೋ ಯೋಚನೆ ಮಾಡಿದ್ದಾರೆ.

ಹೀಗೆ ಕನ್ನಡದಲ್ಲೂ ಬಾಹುಬಲಿ ಚಿತ್ರದ ರೀತಿಯಲ್ಲಿ ಚಿತ್ರವನ್ನು ನಿರ್ದೇಶಿಸಬೇಕೆಂಬ ಕನಸು ನನ್ನದು ಅಂತ ಸುದೀಪ್ ಹೇಳಿದ್ದಾರೆ. ಕನ್ನಡ ಚಲನಚಿತ್ರ ರಂಗದಲ್ಲಿ ಸೀಮಿತ ಮಾರುಕಟ್ಟೆ ಇರೋದ್ರಿಂದ ಇದು ಸಾಧ್ಯವಾಗದೇ ಇರಬಹುದು. ಆದ್ರೆ ಇಂತಹ ಚಲನಚಿತ್ರವನ್ನು ಪಂಚ ಭಾಷೆಗಳಲ್ಲಿ ನಿರ್ದೇಶಿಸುವ ಯೋಚನೆ ಮಾಡಿದ್ದೇನೆ ಎಂದು ಕಿಚ್ಚ ಸುದೀಪ್ ಅವರು ಹೇಳಿಕೊಂಡಿದ್ದಾರೆ.
 
 ಈ ಹಿಂದೆ ಸೂಪರ್ ಡೂಪರ್ ಚಲನಚಿತ್ರ ಬಾಹುಬಲಿಯಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ನಟಿಸಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ತಮಿಳಿನ ಪುಲಿ ಚಿತ್ರದಲ್ಲಿಯೂ ಕಾಣಿಸಿಕೊಂಡಿರೋ ಸುದೀಪ್ ಅದ್ರಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿರೋ ಕಿಚ್ಚನಿಗೆ ಕನ್ನಡದಲ್ಲೂ ಅಂತಹದ್ದೇ ಮೂವಿ ಮೇಕಿಂಗ್ ಮಾಡೋ ಕನಸಿದೆ. 

Share this Story:

Follow Webdunia kannada