Webdunia - Bharat's app for daily news and videos

Install App

ಇಂದು ಹೆಬ್ಬುಲಿ ಆಡಿಯೋ ಬಿಡುಗಡೆ

Webdunia
ಭಾನುವಾರ, 25 ಡಿಸೆಂಬರ್ 2016 (11:49 IST)
ಕಿಚ್ಚ ಸುದೀಪ್ ಅಭಿನಯದ ಹೈವೋಲ್ಟೇಜ್ ಸಿನಿಮಾ ’ಹೆಬ್ಬುಲಿ’. ಈ ಚಿತ್ರದ ಆಡಿಯೋ ಇಂದು ದಾವಣಗೆರೆಯಲ್ಲಿ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಸಿನಿಮಾ ಇದಾಗಿದೆ. ಇದುವರೆಗೂ 100 ಲೈವ್ ಶೋಗಳನ್ನು ಕೊಟ್ಟಿರುವ ಜನ್ಯಾ ಇದೇ ಮೊದಲ ಬಾರಿಗೆ ಸುದೀಪ್ ಚಿತ್ರಕ್ಕೆ ಲೈವ್ ಶೋ ಕೊಡುತ್ತಿದ್ದಾರೆ.
 
ಅರ್ಜುನ್ ಜನ್ಯ ಅವರಿಗೆ ಇದೆ ಸುದೀಪ್ ಜೊತೆಗಿನ 5ನೇ ಸಿನಿಮಾ. ತಂತ್ರಜ್ಞರು ತೆರೆಯ ಹಿಂದೆಯೇ ಉಳಿದುಬಿಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ ಹೆಚ್ಚುಹೆಚ್ಚು ಜನಕ್ಕೆ ತಲುಪುವಂತಾಗುತ್ತದೆ ಎಂಬುದು ಅರ್ಜುನ್ ಜನ್ಯ ಅವರ ಮನದಾಳದ ಮಾತು.
 
ಸುದೀಪ್ ಅಭಿನಯದ ಚಿತ್ರದ ಹಾಡುಗಳನ್ನು ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಹಾಡಲಿದ್ದು, ಕೊನೆಯಲ್ಲಿ ಹೆಬ್ಬುಲಿ ಹಾಡುಗಳನ್ನು ಹಾಡುವ ಮೂಲಕ ಆಡಿಯೋ ಲಾಂಚ್ ಆಗಲಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಸುದೀಪ್ ಸಹೋದರಾಗಿ ಕಾಣಿಸಲಿದ್ದಾರೆ. 
 
ಹೆಬ್ಬುಲಿ ಚಿತ್ರದಲ್ಲಿ ಐದು ಹಾಡುಗಳಿದ್ದು, ರಾಜೇಶ್, ವಿಜಯ್ ಜೊತೆಗೆ ಅನುರಾಧಾ ಭಟ್ ಕೂಡ ಹಾಡಿದ್ದಾರೆ. ಬಾಲಿವುಡ್ ಗಾಯಕರಾದ ಸಿದ್ಧಾರ್ಥ್ ಬಸರೂರ್, ಅರ್ಮಾನ್ ಮಲ್ಲಿಕ್, ಶಾನ್ ಮತ್ತು ಶ್ರೇಯಾ ಘೋಷಾಲ್ ಕೂಡ ಈ ಆಲ್ಬಂಗೆ ಕಂಠದಾನ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿವೋರ್ಸ್ ಬೆನ್ನಲ್ಲೇ ಗೆಳತಿ ಹಾಡಿನ ಆಲ್ಬಂನಲ್ಲಿ ಕಾಣಿಸಿಕೊಂಡ ಜಯಂ ರವಿ, ಟ್ರೋಲ್‌ಗೊಳಗಾದ ಕೆನೀಶಾ ಧ್ವನಿ

ಆಕೆಯಿಂದ ತುಂಬಾ ನಷ್ಟ ಅನುಭವಿಸಿದೆವು: ಡಿಂಪಲ್‌ ಕ್ವೀನ್ ರಚಿತಾ ರಾಮ್ ವಿರುದ್ಧ ಇಂದೆಂಥಾ ದೂರು

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ಮುಂದಿನ ಸುದ್ದಿ
Show comments