Select Your Language

Notifications

webdunia
webdunia
webdunia
webdunia

ಗೋಲ್ಡನ್ ಸ್ಟಾರ್ ಗಣೇಶ್ ರ ಸ್ಟೈಲ್ ಕಿಂಗ್ 60 ದಿನಗಳ ಚಿತ್ರೀಕರಣ ಮುಕ್ತಾಯ

ಗೋಲ್ಡನ್ ಸ್ಟಾರ್ ಗಣೇಶ್ ರ  ಸ್ಟೈಲ್ ಕಿಂಗ್ 60 ದಿನಗಳ  ಚಿತ್ರೀಕರಣ ಮುಕ್ತಾಯ
, ಶುಕ್ರವಾರ, 17 ಏಪ್ರಿಲ್ 2015 (10:54 IST)
ಗೋಲ್ಡನ್ ಸ್ಟಾರ್ ಗಣೇಶ್ ಎನ್ನುವ ಬಿರುದನ್ನು ನಟ ನಿರ್ದೇಶಕ ಹಾಗೂ ನಿರ್ಮಾಪಕ ಎಸ್ ನಾರಾಯಣ್ ಅವರು ನಟ ಗಣೇಶ್ ಅವರಿಗೆ ಪ್ರದಾನ ಮಾಡಿದ್ದು. ಮುಂಗಾರು ಮಳೆಯ ಅಭೂತಪೂರ್ವ ಯಶಸ್ಸಿನ ಬಳಿಕ ಗಣೇಶ್ ಅವರು ಎಸ್ ನಾರಾಯಣ್ ನಿರ್ದೇಶನದ ಚೆಲುವಿನ ಚಿತ್ತಾರ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದರು. ಅಮೂಲ್ಯ ಹಾಗೂ ಗಣೇಶ್ ಜೋಡಿ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. ಅವೆಲ್ಲ ಹಳೆಯ ಕಥೆ.

ಈಗ ನಾವು ಹೇಳ ಹೊರಟಿರುವ ಸಂಗತಿ ಗೋಲ್ಡನ್ ಸ್ಟಾರ್ ಗಣೇಶ್ ಅವರ 26ನೇ ಚಿತ್ರಕ್ಕೆ ಸಂಬಂಧಪಟ್ಟಿರುವುದಾಗಿದೆ.ಸ್ಟೈಲ್ ಕಿಂಗ್ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವನ್ನು ಮಾರುತಿ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಪಕ ಮಾರುತಿ ಅವರು ನಿರ್ಮಾಣ ಮಾಡಿದ್ದಾರೆ. ಅದು ತನ್ನ 65  ದಿನಗಳ ಚಿತ್ರೀಕರಣವನ್ನು ಪೂರೈಸಿದೆ.  
 
ಈ ಚಿತ್ರವನ್ನು ಪಿ ಸಿ ಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಗಣೇಶ್ ಅವರು ದ್ವಿಪಾತ್ರಧಾರಿಯಾಗಿದ್ದಾರೆ. ರೆಮ್ಯನಂಬಿಸನ್ ಮುಖ್ಯಪಾತ್ರಧಾರಿಯಾಗಿದ್ದಾಳೆ. ಅಲ್ಲದೆ ಇದರಲ್ಲಿ ರಂಗಾಯಣ ರಘು, ಸಾಧುಕೋಕಿಲ, ಪದ್ಮಜಾ ರಾವ್, ಮಿತ್ರ, ಗಿರೀಶ್ ಮತ್ತು ಅಮಿತ್ ನಟಿಸಿದ್ದಾರೆ. 
 
ಪಿ ಸಿ ಶೇಖರ್ ಅವರು ಈಗಾಗಲೇ ನಾಯಕ, ರೋಮಿಯೋ, ಚಡ್ಡಿ ದೋಸ್ತ್ ಮುಂತಾದ ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಅವರು ಈ ಮೊದಲು ನಿರ್ದೇಶಿಸಿದಂತೆ ಸಂಪೂರ್ಣ ಮನೋರಂಜನೆಯನ್ನು ಸ್ಟೈಲ್ ಕಿಂಗ್  ಸಹ ಹೊಂದಿದೆಯಂತೆ. ಶೇಖರ್ ಅವರೇ ಇದರ ಕಥೆ ಮತ್ತು ಚಿತ್ರಕಥೆ ಬರೆದಿರುವುದು. ನಟರಾಜ್ ಜಿ ಸಂಭಾಷಣೆಯನ್ನು ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಸರವಣ ಸಂಕಲನ, ಸಂತೋಷ್ ಪಾಂಡಿ ಛಾಯಾಗ್ರಹಣ, ರವಿವರ್ಮ ಅವರ ಸಾಹಸ ಮತ್ತು ಬಾಬಾ ಭಾಸ್ಕರ್ ಅವರ ಕೊರಿಯೋಗ್ರಫಿ ಇದೆ. 

Share this Story:

Follow Webdunia kannada