Select Your Language

Notifications

webdunia
webdunia
webdunia
webdunia

2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ  ಪ್ರಕಟ
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2016 (16:46 IST)
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಷನ್ ಬೇಗ್ ಅವರು ಭಾನುವಾರ ಇಂದು ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರು ಪ್ರಶಸ್ತಿ ವಿಜೇತ ಪಟ್ಟಿಯನ್ನು ಘೋಷಿಸಿದ್ದಾರೆ. ವಾರ್ತಾ ಇಲಾಖೆ ನಿರ್ದೇಶಕ ವಿಶು ಕುಮಾರ್ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ಶಿವರುದ್ರಯ್ಯ ಅವರ ನೇತೃತ್ವದ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. ಒಟ್ಟು 29 ವಿಭಾಗಗಳಲ್ಲಿ ಪ್ರಶಸ್ತಿ ಪ್ರಕಟವಾಗಿದೆ. ಪ್ರಶಸ್ತಿಗಳಿಗೆ ಅರ್ಹರನ್ನು ಗುರುತಿಸುವಲ್ಲಿ ಸಮಿತಿಯು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ಸಚಿವ ರೋಷನ್ ಬೇಗ್ ತಿಳಿಸಿದರು.
 
ಅತ್ಯುತ್ತಮ ನಟನಾಗಿ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕಾಗಿ ಸಂಚಾರಿ ವಿಜಯ್ ಪಡೆದುಕೊಂಡರೆ, 'ವಿದಾಯ' ಚಿತ್ರದ ನಟನೆಗಾಗಿ ಲಕ್ಷ್ಮಿ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
 
ಅತ್ಯುತ್ತಮ ಪೋಷಕ ನಟ (ಡಾ.ಕೆ.ಎಸ್.ಅಶ್ವತ್ಥ ಪ್ರಶಸ್ತಿ)- ಅರುಣ್ ದೇವಸ್ಯ
 
ಅತ್ಯುತ್ತಮ ಪೋಷಕ ನಟಿ- ಡಾ. ಬಿ. ಜಯಶ್ರೀ (ಕೌದಿ)
 
ಡಾ.ರಾಜ್ ಕುಮಾರ್ ಪ್ರಶಸ್ತಿ- ಬಸಂತ್ ಕುಮಾರ್ ಪಾಟೀಲ್
 
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ಪ್ರೊ.ಬರಗೂರು ರಾಮಚಂದ್ರಪ್ಪ
 
ಡಾ.ವಿಷ್ಣುವರ್ಧನ್ ಪ್ರಶಸ್ತಿ- ಸುರೇಶ್ ಅರಸ್ (ಸಂಕಲನಕಾರ)
 
ಪ್ರಥಮ ಅತ್ಯುತ್ತಮ ಚಿತ್ರ- ಹರಿವು
 
ಎರಡನೆಯ ಅತ್ಯುತ್ತಮ ಚಿತ್ರ- ಅಭಿಮನ್ಯು
 
ಮೂರನೆಯ ಅತ್ಯುತ್ತಮ ಚಿತ್ರ -ಹಗ್ಗದ ಕೊನೆ
 
ಅತ್ಯುತ್ತಮ ಮಕ್ಕಳ ಚಿತ್ರ- ಬಾನಾಡಿ
 
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ-  ಗಜಕೇಸರಿ
 
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ವಿಷದ ಮಳೆ
 
ಅತ್ಯುತ್ತಮ ಚಿತ್ರಕಥೆ- ಪಿ ಶೇಷಾದ್ರಿ (ವಿದಾಯ)
 
ಅತ್ಯುತ್ತಮ ಕಥೆ- ಲಿವಿಂಗ್ ಸ್ಮೈಲ್ ವಿದ್ಯಾ
 
ಅತ್ಯುತ್ತಮ ಗಾಯಕ - ಚಿಂತನ್ (ಗಜಕೇಸರಿ)
 
ಅತ್ಯುತ್ತಮ ಗಾಯಕಿ- ವಿದ್ಯಾಮೋಹನ್
 
ವಿಶೇಷ ಸಾಮಾಜಿಕ ಕಾಳಜಿ ಚಿತ್ರ- ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ (ತುಳು)
 
ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರ- ಉಳಿದವರು ಕಂಡಂತೆ
 
ಅತ್ಯುತ್ತಮ ಸಂಗಿತ ನಿರ್ದೇಶನ- ಬಿ. ಅಜನೀಶ್ ಲೋಕನಾಥ್
 
ಅತ್ಯುತ್ತಮ ಬಾಲನಟ- ಮಾಸ್ಟರ್ ಸ್ನೇಹಿತ್
 
 

Share this Story:

Follow Webdunia kannada