Select Your Language

Notifications

webdunia
webdunia
webdunia
webdunia

ಲಿಪ್ ಲಾಕ್ ಮಾಡೋಕೆ 5 ಕೋಟಿ ಸಂಭಾವನೆ ಪಡೆದ ಶ್ರೀದೇವಿ

ಲಿಪ್ ಲಾಕ್ ಮಾಡೋಕೆ 5 ಕೋಟಿ ಸಂಭಾವನೆ ಪಡೆದ ಶ್ರೀದೇವಿ
, ಗುರುವಾರ, 26 ಫೆಬ್ರವರಿ 2015 (12:02 IST)
ನಿಜ ಕಣ್ರೀ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಈಗ ಪುಲಿ ಎನ್ನುವ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಮಹಾರಾಣಿ ಪಾತ್ರಧಾರಿಯಾಗಿ ಶ್ರೀದೇವಿ ನಟಿಸುತ್ತಿದ್ದಾರೆ. ಈ ಸಂಗತಿ ಸಾಕಷ್ಟು ದಿನಗಳಿಂದ ಹರಿದಾಡಿದೆ. ಜೊತೆಗೆ ಆಕೆಯು ಶೂಟಿಂಗ್ ಕಾರ್ಯದಲ್ಲೂ ಸಹಿತ ನಿರತರಾಗಿದ್ದಾರೆ. ಈಗಾಗಲೇ ನಾವು ನಿಮಗೆ ಈ ಬಗ್ಗೆ ತಿಳಿಸಿದ್ದೇವೆ. ಆದರೆ ಈಗ ಬಂದಿರುವ  ಸುದ್ದಿ ಅಂದ್ರೆ ನಮ್ಮ ಕಿಚ್ಚ ಸುದೀಪ್ ಅವರಿಗೆ ಮುತ್ತು ಕೊಡಲು ಈಕೆ 5 ಕೋಟಿಗಳಷ್ಟು ಮೊತ್ತದ ಸಂಭಾವನೆ ಪಡೆಯುತ್ತಿದ್ದಾರಂತೆ. ಮದುವೆ, ಮಕ್ಕಳಾದ ಬಳಿಕ ಆಕೆ ಇಂಗ್ಲೀಷ್-ವಿಂಗ್ಲೀಷ್ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದರು. ಅದಾದ ಬಳಿಕ ಈಗ ಮತ್ತೆ ಪುಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಾಲಿವುಡ್‌ನಲ್ಲಿ ಈಗ ಚುಂಬನದ ಸುದ್ದಿಗೆ ಹೆಚ್ಚು ಬೆಲೆ ಬಂದಿದೆ. ಇಷ್ಟು ವಯಸ್ಸಾದರೂ ಶ್ರೀದೇವಿಯ ಮಾದಕತೆ ಕಡಿಮೆ ಆಗದೆ ಇರುವ ಬಗ್ಗೆ ಚಿತ್ರ ಪಂಡಿತರು ಬೆರಗಾಗಿದ್ದಾರೆ. 
ವಿಜಯ್ ಅವರು ತ್ರಿಪಾತ್ರಧಾರಿ ಆಗಿರುವ ಈ ಚಿತ್ರದಲ್ಲಿ ಶ್ರುತಿ ಹಾಸನ್, ಹನ್ಸಿಕ ಮೋಟ್ವಾನಿ ಸಹ ಅಭಿನಯಿಸುತ್ತಿದ್ದಾರೆ.ಈ ಚಿತ್ರದ ಮಹಾರಾಜನಾಗಿರುವ ಕಿಚ್ಚ ಸುದೀಪ್ ಅವರ ಮುತ್ತಿಗೆ ದೊರೆತ ಬೆಲೆ ಕಂಡು ಇಡೀ ಭಾರತೀಯ ಚಿತ್ರರಂಗ ಬೆರಗಾಗಿದೆ. ಒಟ್ಟಾರೆ ಮುತ್ತಿನ ದೃಶ್ಯದಲ್ಲಿ ಭಾಗವಹಿಸಲು ಆಕೆ ಕೇಳಿದ ಸಂಭಾವನೆಯನ್ನು ಮುಲಾಜಿಲ್ಲದೆ ನಿರ್ಮಾಪಕರು ನೀಡಿದ್ದಾರಂತೆ.

Share this Story:

Follow Webdunia kannada