Webdunia - Bharat's app for daily news and videos

Install App

ರಾಜಮೌಳಿ ವಿರುದ್ಧ ಶ್ರೀದೇವಿ ಕೆಂಡಾಮಂಡಲ

Webdunia
ಮಂಗಳವಾರ, 27 ಜೂನ್ 2017 (11:49 IST)
ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಕೊನೆಗೂ ಬಾಹುಬಲಿ ಚಿತ್ರದಲ್ಲಿ ನಟಿಸಲು ನಿರಾಕರಣೆ ಕುರಿತ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ನಿರ್ದೆಶಕ ರಾಜಮೌಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ಮಾಮ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶ್ರೀದೇವಿ, ತೆಲುಗು ಚಾನಲ್`ನಸಂದರ್ಶನದಲ್ಲಿ ಮಾತನಾಡಿದ್ದು,ದರೆ, ಬಾಹುಬಲಿ ಬಗ್ಗೆಯೇ ಯಾಕಿಷ್ಟು ಸುದ್ದಿಯಾಗುತ್ತಿದೆ. ಬಾಹುಬಲಿ-1 ಮತ್ತು 2 ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿದ್ದರೂ ಜನ ಈಗಲೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ.  ಈ ಬಗ್ಗೆ ಮಾತನಾಡುವುದನ್ನ ಹಲವು ಬಾರಿ ನಾನು ತಡೆದಿದ್ದೆ. ಈಗ ಈ ಕುರಿತಂತೆ ಸ್ಪಷ್ಟನೆಗೆ ನಿರ್ಧರಿಸಿದ್ದೇನೆ.

ಚಿತ್ರಕ್ಕಾಗಿ 10 ಕೋಟಿ ರೂ. ಸಂಭಾವನೆ ಜೊತೆಗೆ ಹೋಟೆಲ್`ನ ಒಂದು ಮಹಡಿ ಪೂರ್ತಿ ಬುಕ್ ಮಾಡಿಕೊಡಬೇಕು. 10 ಫ್ಲೈಟ್ ಟಿಕೆಟ್ಸ್`ಗೆ ಬೇಡಿಕೆ ಇಟ್ಟಿದ್ದೆ ಎಂಬ ವದಂತಿಗಳು ಹರಡಿವೆ. 50 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಡಿಮ್ಯಾಂಡ್`ಗಳನ್ನ ಮಾಡಿ ಇಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ನಿಮಗನ್ನಿಸುತ್ತಾ..? ಆ ರೀತಿ ಡಿಮ್ಯಾಂಡ್ ಮಾಡಿದ್ದರೆ ಸಿನಿಮಾ ಮಂದಿ ನನ್ನ ಗಂಟು ಮೂಟೆ ಕಟ್ಟಿಸುತ್ತಿದ್ದರು ಎಂದು ಶ್ರೀದೇವಿ ಹೇಳಿದ್ಧಾರೆ.

ನಾನು ಈ ರೀತಿ ಡಿಮ್ಯಾಂಡ್ ಮಾಡಿದ್ದೇನೆಂದು ಕೇಳುವುದೇ ನೋವಿನ ವಿಷಯ. ನಿರ್ಮಾಪಕರು ಈ ಬಗ್ಗೆ ರಾಜಮೌಳಿಗೆ ತಪ್ಪು ಮಾಹಿತಿ ನೀಡಿರಬಹುದು ಅಥವಾ ತಪ್ಪು ಸಂದೇಶ ಹೋಗಿರಬಹುದು. ಇದನ್ನೆಲ್ಲ ಮಾಧ್ಯಮಗಳ ಮುಂದೆ ಹೇಳಿದ್ದು ಸರಿಯಲ್ಲ. ರಾಜಮೌಳಿ ಸಂದರ್ಶನ ನೋಡಿ ನಿಜಕ್ಕೂ ನನಗೆ ಶಾಕ್ ಆಯ್ತು. ಮಾನಸಿಕವಾಗಿ ತುಂಬಾನೆ ನೋವಾಯ್ತು. ರಾಜಮೌಳಿ ತಾಳ್ಮೆ ಮತ್ತು ಘನತೆ ಇರುವ ವ್ಯಕ್ತಿ ಎಂದು ಕೇಳಿದ್ಧೇನೆ. ಅವರು ನಿರ್ದೇಶನ ಈಗ ಮೂವಿ ನೋಡಿದ್ದೇನೆ. ಅವರ ಜೊತೆ ಕೆಲಸ ಮಾಡಲು ನನಗೆ ಖುಷಿ ಇದೆ. ಅವರೊಬ್ಬ ಗ್ರೇಟ್ ತಂತ್ರಜ್ಞ. ಆದರೆ, ನನ್ನ ಬಗ್ಗೆ ಅವರು ಮಾತನಾಡಿದ ರೀತಿ ನಿಜಕ್ಕೂ ಘಾಸಿಯುಂಟುಮಾಡಿದೆ’ ಎಂದು ಶ್ರೀದೇವಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ನಟ ದರ್ಶನ್ ಗೆ ಈಗ ಎಲ್ಲೇ ಹೋದ್ರೂ ವೈಫು ವಿಜಿ ಜೊತೆಗಿರಲೇಬೇಕು

Prithvi Bhat marriage Audio viral: ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್: ಮನೆಯವರಿಂದ ಗಂಭೀರ ಆರೋಪ

Rocking star Yash: ಉಜ್ಜೈನಿ ಮಹಾಕಾಳನಿಗೆ ಪೂಜೆ ಸಲ್ಲಿಸಿದ ರಾಕಿಂಗ್ ಸ್ಟಾರ್ ಯಶ್: ಹಿಂದಿಯಲ್ಲಿ ಮಾತನಾಡಿದ ವಿಡಿಯೋ

ಇಟಲಿಯ ಉದ್ಯಮಿಯೊಂದಿಗೆ ಉಂಗುರ ಬದಲಾಯಿಸಿಕೊಂಡ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

Drug Case:ನಟಿ ನೀಡಿದ ದೂರಿನಂತೆ ಮಲಯಾಳಂ ನಟ ಶೈನ್ ಟಾಮ್ ಚಾಕೊ ಅರೆಸ್ಟ್‌

ಮುಂದಿನ ಸುದ್ದಿ
Show comments