Select Your Language

Notifications

webdunia
webdunia
webdunia
webdunia

ಎಸ್ ಪಿ ಬಾಲಸುಬ್ಯಹ್ಮಣ್ಯಂಗೆ ಐಎಫ್ಎಫ್ಐ ಗೌರವ

ಎಸ್ ಪಿ ಬಾಲಸುಬ್ಯಹ್ಮಣ್ಯಂಗೆ ಐಎಫ್ಎಫ್ಐ ಗೌರವ
NewDelhi , ಬುಧವಾರ, 2 ನವೆಂಬರ್ 2016 (09:56 IST)
ನವದೆಹಲಿ: ಖ್ಯಾತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗೋವಾದಲ್ಲಿ ನಡೆಯಲಿರುವ 47 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ (ಐಎಫ್ಎಫ್ಐ)ದಲ್ಲಿ ಶತಮಾನದ ಗಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಗಾಯಕರಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ದಶಕಗಳಿಂದ ರಂಜಿಸುತ್ತಿರುವ ಸುಮಧುರ ಕಂಠದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಾಧನೆ ಗಮನಿಸಿ ಪ್ರಸಕ್ತ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಇಳಯರಾಜ, ರೆಹಮಾನ್ ಸೇರಿದಂತೆ ಹಲವು ಖ್ಯಾತ ಸಂಗೀತ ನಿರ್ದೇಶಕರ ಮೆಚ್ಚಿನ ಗಾಯಕರಾಗಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಕಳೆದ 50 ವರ್ಷಗಳಿಂದ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ನವಂಬರ್ 20 ರಿಂದ ಚಿತ್ರೋತ್ಸವ ನಡೆಯಲಿದ್ದು, ಅಂದು ಎಸ್ ಪಿ ಅವರನ್ನು ಗೌರವಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ನಾಗಾರ್ಜುನ ಮಕ್ಕಳ ಮದುವೆ ಸಂಭ್ರಮ