Select Your Language

Notifications

webdunia
webdunia
webdunia
webdunia

ಡೋಲಿ ಕಿ ಡೋಲಿ ಚಿತ್ರದಲ್ಲಿ ಸೋನಂ ಧರಿಸಿದ ಉಡುಪುಗಳ ಸಂಖ್ಯೆ ?

ಡೋಲಿ ಕಿ ಡೋಲಿ ಚಿತ್ರದಲ್ಲಿ ಸೋನಂ ಧರಿಸಿದ ಉಡುಪುಗಳ ಸಂಖ್ಯೆ ?
, ಶನಿವಾರ, 20 ಡಿಸೆಂಬರ್ 2014 (14:59 IST)
ಸಾಮಾನ್ಯವಾಗಿ ಹಾಡುಗಳ ಚಿತ್ರೀಕರಣದಲ್ಲಿ ಭಾಗವಹಿಸುವ ಹೀರೋಯಿನ್ ಗಳು ತಮ್ಮ ಉಡುಪನ್ನು ಬದಲಾಯಿಸಿ ಕೊಳ್ಳುತ್ತಾರೆ. ಅದರಿಂದ ಹಾಡುಗಳು ಮತ್ತಷ್ಟು ಇಷ್ಟವಾಗುತ್ತದೆ ಜನರಿಗೆ. ಅಲ್ಲಿ  ಕಾಸ್ಟೂಂಗೂ ಸಹಿತ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಬಾಲಿವುಡ್ ಸುಂದರಿ ಸೋನಂ ಕಪೂರ್ ಸೃಷ್ಟಿ ಮಾಡಿದ ಹಂಗಾಮ ಸಹ ಡ್ರಸ್ ಗಳ ಬಗ್ಗೆ ಆಗಿದೆ. ಹೇಗೆ ಅಂತಿರ ಅದರ ವಿವರ ಇಲ್ಲಿದೆ ಬನ್ನಿ ಇತ್ತ! 
ಆಕೆ ಸನ್ನಿವೇಶ ಒಂದರಲ್ಲಿ ಸುಮಾರು 16  ಉಡುಪುಗಳನ್ನು ಅದರಲ್ಲೂ ವಧು ಧರಿಸುವ ಭಿನ್ನ ಜಾತಿ -ಧರ್ಮಕ್ಕೆ ಸೇರಿದ ಸಾಂಪ್ರದಾಯಿಕ ಉಡುಪುಗಳನ್ನು ಬದಲಾಯಿಸಿದ್ದಾಳೆ. ಈ ಮೂಲಕ ಆಕೆ  ರೆಕಾರ್ಡ್  ಮಾಡಿದ್ದಾಳೆ. ಈ ಚಿತ್ರದ ಹೆಸರು ಡೋಲಿ ಕಿ ಡೋಲಿ. ದಕ್ಷಿಣ ಭಾರತದ ಮದುವೆಯ ಸಾಂಪ್ರದಾಯಿಕ ಉಡುಪಿನಿಂದ ಹಿಡಿದು ಮಹಾರಾಷ್ಟ್ರ, ಗುಜರಾತಿ, ಇಸ್ಲಾಂ, ಕ್ಯಾಥೊಲಿಕ್ ಹೀಗೆ ಬಗೆಬಗೆಯ ಮದುವೆಯ ಉಡುಪು ಧರಿಸಿ ಮೆರೆದಿದ್ದಾಳೆ ಈ ಚೆಲುವೆ. 
 
ಈ ಸಿನಿಮಾವನ್ನು ಅರ್ಬಾಜ್ ಖಾನ್ ಅವರು ನಿರ್ಮಾಣ ಮಾಡುತ್ತಿದ್ದಾರೆ, ಅಭಿಷೇಕ್ ಡೋಗ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೊದಲ ಪ್ರತಿಗೆ ಬಾಲಿವುಡ್ ಮಂದಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 
 

Share this Story:

Follow Webdunia kannada