Select Your Language

Notifications

webdunia
webdunia
webdunia
webdunia

ನಾನು ಪ್ರಶಸ್ತಿಗಾಗಿ ಕೆಲಸ ಮಾಡೋದಿಲ್ಲ, ಕಲೆಗಾಗಿ ಶ್ರಮ ಪಡುತ್ತೇನೆ- ಸೋನಮ್ ಕಪೂರ್

ನಾನು ಪ್ರಶಸ್ತಿಗಾಗಿ ಕೆಲಸ ಮಾಡೋದಿಲ್ಲ, ಕಲೆಗಾಗಿ ಶ್ರಮ ಪಡುತ್ತೇನೆ- ಸೋನಮ್ ಕಪೂರ್
, ಗುರುವಾರ, 11 ಫೆಬ್ರವರಿ 2016 (10:57 IST)
ಪ್ರತಿ ಸಿನಿಮಾ ತಾರೆಯರಿಗೂ ನಾನು ಜೀವನದಲ್ಲಿ ಒಮ್ಮೆಯಾದ್ರೂ ಪ್ರಶಸ್ತಿ ಬರುವಂತಹ ಪಾತ್ರಗಳನ್ನು ಮಾಡ್ಬೇಕು. ನನ್ನ ಅಭಿನಯಕ್ಕೆ ತಕ್ಕದಾದ ಅವಾರ್ಡ್ ಲಭಿಸಬೇಕು ಅನ್ನೋ ಮಹಾದಾಸೆಯಿರುತ್ತೆ.ಆದ್ರೆ ನಟಿ ಸೋನಮ್ ಕಪೂರ್ ಮಾತ್ರ ಇದಕ್ಕೆ ವಿಭಿನ್ನ ಉದಾಹರಣೆ.

ಹೌದು... ಸದ್ಯ ನೀರ್ಜಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸೋನಮ್ ಕಪೂರ್ ನಾನು ಯಾವತ್ತೂ ಪ್ರಶಸ್ತಿ ಸಿಗುತ್ತೆ ಅನ್ನೋ ಕಾರಣಕ್ಕಾಗಿ ಅಭಿನಯಿಸಿಲ್ಲ. ನಾನು ಪ್ರತಿ ಬಾರಿ ಒಂದೊಂದು ಸಿನಿಮಾದಲ್ಲಿಯೂ ಅಭಿನಯುವಾಗ ನನ್ನ ಪಾತ್ರ ಚೆನ್ನಾಗಿ ಮೂಡಿ ಬರಬೇಕು ಅಂದುಕೊಂಡೇ ಅಭಿನಯಿಸುತ್ತೇನೆ.
 
ಹಾಗಂಥ ನಾನು ಯಾವತ್ತೂ ಪ್ರಶಸ್ತಿ ಸಿಗಬೇಕು ಅಂತಾ ಬಯಸೇ ಇಲ್ಲ. ನನ್ನ ಉದ್ದೇಶ ಪ್ರಶಸ್ತಿ ಪಡೆಯೋದಲ್ಲ. ಬದಲಾಗಿಗೆ ಕಲೆ ತಕ್ಕ ಗೌರವ ಕೊಡೋದು ಅಂತಾ ನಟಿ ಸೋನಮ್ ಕಪೂರ್ ಅವರು ಹೇಳಿದ್ದಾರೆ.ಸದ್ಯ ನನಗೆ ಬಾಲಿವುಡ್ ನಲ್ಲಿ ದೊರಕಿರುವ ಸ್ಥಾನಮಾನದ ಬಗ್ಗೆ ನನಗೆ ಸಾಕಷ್ಟು ಖುಷಿಯಿದೆ. ಅದೇ ನನ್ನ ಪಾಲಿಗೆ ಬಹುದೊಡ್ಡ ಗೌರವ. ಇನ್ನು ಮುಂದೆಯೂ ಅದೇ ರೀತಿ ಇರುತ್ತೆ ಅನ್ನೋ ನಂಬಿಕೆ ನನಗಿದೆ. ಅದಕ್ಕಾಗಿ ನಾನು ಸಾಕಷ್ಟು ಶ್ರಮ ಕೂಡ ಪಡುತ್ತೇನೆ. ಹಾಗಂಥ ಪ್ರಶಸ್ತಿಗಾಗಿ ನಾನು ಕಾಯೋದಿಲ್ಲ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada