Select Your Language

Notifications

webdunia
webdunia
webdunia
webdunia

ಬಾಲಿವುಡ್ ಹಾಟ್ ನಟಿ ಸೋನಂ ಕಪೂರ್‌ಗೆ ಹೆಚ್1ಎನ್1 ಸೋಂಕು..?!

ಬಾಲಿವುಡ್ ಹಾಟ್ ನಟಿ ಸೋನಂ ಕಪೂರ್‌ಗೆ ಹೆಚ್1ಎನ್1 ಸೋಂಕು..?!
ಅಹಮದಾಬಾದ್ , ಶನಿವಾರ, 28 ಫೆಬ್ರವರಿ 2015 (19:19 IST)
ಬಾಲಿವುಡ್‌ನ ಖ್ಯಾತ ನಟಿ ಸೋನಂ ಕಪೂರ್ ಅವರಲ್ಲಿ ಹೆಚ್1ಎನ್1 ಸೋಂಕು ಕಾಣಿಸಿಕೊಂಡಿದೆ ಎಂದು ಬಾಲಿವುಡ್ ವಲಯದಲ್ಲಿ ಹರಡಿದೆ.
 
ಸೋನಂ ಕಪೂರ್ ಪ್ರಸ್ತುತ ಸೂರಜ್ ಭಾರ್ತಜ್ಯ ಅವರು ನಿರ್ದೇಶಿಸುತ್ತಿರುವ, ಸಲ್ಮಾನ್ ಖಾನ್ ನಾಯಕ ನಟರಾಗಿರುವ ಪ್ರೇಂ ರತನ್ ಧನ್ ಪಾಯೋ ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಗುಜರಾತ್ ರಾಜ್ಯದ ರಾಜ್‌ಕೋಟ್ ಜಿಲ್ಲೆಯ ಗೊಂಡಲ್ ಬಳಿ ಚಿತ್ರೀಕರಣ ನಡೆಸಲಾಗುತ್ತಿತ್ತು. 
 
ಕಪೂರ್ ಅತಿ ಜ್ವರದಿಂದ ನರಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅವರನ್ನು ರಾಜ್ ಕೋಟ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ನಡೆಸಿದ್ದು, ಹೆಚ್1ಎನ್1 ರೋಗದ ಸೋಂಕಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಅಲ್ಲದೆ ಕಪೂರ್ ಅವರ ದೈಹಿಕ ಸಲಹೆಗಾರರೂ ಕೂಡ ಇದೇ ಸೋಂಕಿನಿಂದ ನರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರೋಗದ ಸೋಂಕಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್‌ಕೋಟ್ ನಿಂದ ಮುಂಬೈಗೆ ವಾಪಸಾಗಿದ್ದಾರೆ ಎನ್ನಲಾಗಿದೆ. 
 

Share this Story:

Follow Webdunia kannada