Select Your Language

Notifications

webdunia
webdunia
webdunia
webdunia

ಸೋನಂ ಬವೇಜಾಗೆ ಕೈ ತಪ್ಪಿತು ಪುನಿತ್ ಜೋಡಿಯಾಗಿ ನಟಿಸುವ ಚಾನ್ಸ್

ಸೋನಂ ಬವೇಜಾಗೆ ಕೈ ತಪ್ಪಿತು ಪುನಿತ್ ಜೋಡಿಯಾಗಿ ನಟಿಸುವ ಚಾನ್ಸ್
, ಶನಿವಾರ, 2 ಮೇ 2015 (10:16 IST)
ಕಾಲಿವುಡ್ ನಿರ್ದೇಶಕ ಸರವಣನ್  ಅವರು ಪುನೀತ್ ರಾಜ್ ಕುಮಾರ್ ನಟನೆಯ 25 ನೇ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರದ ಹೀರೋಯಿನ್ ಆಗಿ  ಪಂಜಾಬಿ ಕುಡಿ ಸೋನಂ ಬವೇಜಾಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ಆಕೆ ಜಾಗಕ್ಕೆ ಮರಾಠಿ ಹಾಗೂ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಗೆದ್ದಿರುವ ಪಲ್ಲವಿ ಸುಭಾಷ್  ಆಯ್ಕೆಯಾಗಿದ್ದಾಳೆ.  
ಪಲ್ಲವಿ ಈ ಬಗ್ಗೆ ಮಾಧ್ಯಮಗಳ ಬಳಿ ನಾನು ಹೆಚ್ಚು ದಕ್ಷಿಣ ಭಾರತದ ಸಿನಿಮಾಗಳನ್ನು ವೀಕ್ಷಿಸುತ್ತೇನೆ.ನನಗೆದಕ್ಷಿನದ ಚಿತ್ರಗಳಲ್ಲಿ ನಟಿಸಲು ಇಷ್ಟ. ನಾನು ಹೆಚ್ಚು ಕನ್ನಡ ಚಿತ್ರಗಳನ್ನು ನೋಡಿಲ್ಲ. ಆದರೆ ಪುನೀತ್ ರಾಜ್ ಕುಮಾರ್ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು ಎನ್ನುವುದು ನನಗೆ ಗೊತ್ತಿದೆ. ಅವರ 25  ನೇ ಚಿತ್ರದಲ್ಲಿ ನಟಿಸುವುದು ಅತ್ಯಂತ ಖುಷಿ ನೀಡಿದ ಸಂಗತಿಯಾಗಿದೆ ಎಂದು ಹೇಳಿದ್ದಾಳೆ. ಈಕೆ ಈಗ ಗೌತಮ್ ಮೆನನ್ ಅವರ ನಿರ್ದೇಶನದಲ್ಲಿ ಸಿಂಬುನಟನೆಯ ಚಿತ್ರದಲ್ಲಿ ನಟಿಸುತ್ತಿದ್ದಾಳೆ. 
 
ಸೋನಂ ಬದಲಾವಣೆಗೆ ಮುಖ್ಯ ಕಾರಣ ಆಕೆ ಪಾತ್ರಕ್ಕೆ ಹೆಚ್ಚು ಹೊಂದಿಕೆ ಆಗುವುದಿಲ್ಲ ಎನ್ನುವುದು ಮುಖ್ಯ ಕಾರಣವಾಗಿದೆ. ಆದ ಕಾರಣ ಆಕೆ ಬದಲಿಗೆ ಪಲ್ಲವಿ ಬಂದಿದ್ದಾಳೆ. ಈ ಚಿತ್ರದಲ್ಲಿ  ತಮಿಳು ನಟ ಅರುಣ್ ವಿಜಯ್ ಗೂ ಸಹಿತ ನಟಿಸುವ ಅವಕಾಶ ದೊರಕಿದೆ. ಈತನದ್ದು ಸಹ ಮುಖ್ಯಪಾತ್ರಗಳಲ್ಲಿ ಒಂದಾಗಿದೆಯಂತೆ. ಅಜಿತ್ ಅವರ ನಟನೆಯ ಗೌತಮ್ ಮೆನನ್ ಚಿತ್ರ ಎನ್ನೈಅರಿನ್ದಾಲ್ ಚಿತ್ರದಲ್ಲಿ ಉತ್ತಮ ಅವಕಾಶ ಪಡೆದಿದ್ದರು ಅರುಣ್. ಅದು ಅವರ ತಾರ ಬದುಕಲ್ಲಿ ಉತ್ತಮ ತಿರುವು ನೀಡಿದೆ. 

Share this Story:

Follow Webdunia kannada