Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಸಿನ್ಹಾ ಮುಂಬೈನ ಲೇಡಿ ರಜನಿ: ಮುರುಗದಾಸ್

ಸೋನಾಕ್ಷಿ ಸಿನ್ಹಾ ಮುಂಬೈನ ಲೇಡಿ ರಜನಿ: ಮುರುಗದಾಸ್
, ಶುಕ್ರವಾರ, 22 ಮೇ 2015 (10:13 IST)
ಅಕೀರಾ ಚಿತ್ರದ ಶೂಟಿಂಗ್‌ನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಬ್ಯುಸಿಯಾಗಿದ್ದಾರೆ. ಅಕೀರಾ ಚಿತ್ರದ ನಿರ್ದೇಶನ ಮಾಡುತ್ತಾ ಮಾಡುತ್ತಾ ಮತ್ತು ಮಾಡುತ್ತಾ...! ಅವರು ನಟಿ ಸೋನಾಕ್ಷಿ  ಸಿನ್ಹಾ ಅವರ ನಟನೆಗೆ ಫಿದಾ ಆಗಿ ಬಿಟ್ಟಿದ್ದಾರಂತೆ. 
ಗಜನಿ, ಹಾಲಿಡೇ, ಕತ್ತಿಯಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಈ ನಿರ್ದೇಶಕ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸೋನಾಕ್ಷಿ ಸಿನ್ಹಾ ಅವರನ್ನು ಹೋಲಿಸಿದ್ದಾರೆ. ಆಕೆಯನ್ನು ಲೇಡಿ ರಜನಿ ಆಫ್ ಮುಂಬೈ ಎಂದು ಕರೆದಿದ್ದಾರೆ. ಆಕೆಯ ಡೈಲಾಗ್ ಡೆಲವರಿ ತನ್ನನ್ನು ಮುಗ್ಧಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
 
ತಮಿಳಿನಲ್ಲಿ ಸೂಪರ್ ಹಿಟ್ ಆದ ಮೌನಗುರು ಚಿತ್ರವನ್ನು ಅಕೀರಾ ಹೆಸರಲ್ಲಿ ರೀಮೇಕ್ ಮಾಡುತ್ತಿದ್ದಾರೆ ಮುರುಗದಾಸ್. ಇದು ಥ್ರಿಲ್ಲರ್ ಮೂವಿಯಾಗಿದ್ದು, ಇದರಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಅಪ್ಪ ಶತ್ರುಘ್ನ ಸಿನ್ಹಾ ಮೊಟ್ಟಮೊದಲ ಬಾರಿ ಒಟ್ಟಿಗೆ ಅಭಿನಯಿಸಿದ್ದಾರೆ. 

Share this Story:

Follow Webdunia kannada